ಯಾಣದಲ್ಲಿ ಗುಡ್ಡ ಕುಸಿತ

Land slide at yana
Published on

ಕಾರವಾರ: ಯಾಣದ ಪ್ರಸಿದ್ಧ ಭೈರವೇಶ್ವರ ಶಿಖರದ ಸಮೀಪ ಗುಡ್ಡ ಕುಸಿತವಾಗಿದೆ.

ಸುಮಾರು ಅರ್ಧ ಎಕರೆ ದರೆ ಜರಿದಿದ್ದು, ಅಂಗಡಿಯೊಂದು ನಾಶವಾಗಿದೆ. ಶಿರಸಿ ಕಡೆಯಿಂದ ಬರುವ ದಾರಿ ಬಂದ್ ಆಗಿದೆ. ಪಾರ್ಕಿಂಗ್ ಸ್ಥಳದಿಂದ ಗಣಪತಿ ದೇವಸ್ಥಾನದವರೆಗೆ ನೀರು ಹರಿಯುವ ಪೈಪ್ ಗಳು ಮುಚ್ಚಿದ್ದು, ನೀರು ರಸ್ತೆಯಲ್ಲಿ ಹರಿಯುತ್ತುದೆ.

ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಸುಮಾರು 150 ಮೀಟರ್ ದೂರದಿಂದಲೇ ವೀಕ್ಷಣೆಗೆ ಅನುವು ಮಾಡಿಕೊಳ್ಳಲಾಗುತ್ತಿದೆ.

ಈ ಹಿಂದೆ ಕುಮಟಾ ಭಾಗದಿಂದ ಬರುವ ದಾರಿಯಲ್ಲಿ ಕುಸಿತ ಉಂಟಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net