ಕದ್ರಾ-ಕೊಡಸಳ್ಳಿ ನಡುವೆ ಗುಡ್ಡ ಕುಸಿತ- ಸ್ಥಳೀಯರಲ್ಲಿ ಆತಂಕ

Land slide
Published on

ಕಾರವಾರ: ಕದ್ರಾ-ಕೊಡಸಳ್ಳಿ ರಸ್ತೆಯ ನಡುವೆ ದಟ್ಟ ಕಾಡಿನಲ್ಲಿ, ಮಾನವನ ಹೆಚ್ಚಿನ ಹಸ್ತಕ್ಷೇಪ ಇಲ್ಲದ ಪ್ರದೇಶದಲ್ಲಿ ಭೂ ಕುಸಿತ ಆಗಿರುವುದು ಅಚ್ಚರಿ ಹಾಗೂ ಆತಂಕಕ್ಕೆ ಕಾರಣವಾಗಿದೆ.

ಶುಕ್ರವಾರ ಗುಡ್ಡ ಕುಸಿತದ ಡ್ರೋನ್ ಚಿತ್ರೀಕರಣ ನಡೆಸಲಾಗಿದ್ದು, ಕಳೆದ ವರ್ಷ ಅಂಕೋಲಾ ಶಿರೂರಿನಲ್ಲಿ ಆದಷ್ಟೇ ದೊಡ್ಡ ಪ್ರಮಾಣದಲ್ಲಿ ಕುಸಿತ ಉಂಟಾಗಿರುವುದು ಗಮನಕ್ಕೆ ಬಂದಿದೆ.ಆದರೆ, ಯಾವುದೇ ಮನೆ, ವಾಹನ ಓಡಾಟ ಇಲ್ಲದ ಕಾರಣ ಹಾನಿ ಸಂಭವಿಸಿಲ್ಲ. ಮಾನವನ ಹಸ್ತಕ್ಷೇಪ ಇರುವ ಎಂದರೆ, ರಸ್ತೆ, ಗಣಿಗಾಗಿ ಅವೈಜ್ಞಾನಿಕವಾಗಿ ಗುಡ್ಡ ಕಡಿದಿರುವ ಪ್ರದೇಶದಲ್ಲಿ ಜಿಲ್ಲೆಯಲ್ಲಿ ಗುಡ್ಡ ಕುಸಿತ ಸಂಭವಿಸುತ್ತಿರುವುದು ಕಂಡುಬAದಿದೆ. ಆದರೆ, ಅಂಥ ಯಾವುದೇ ಹಸ್ತಕ್ಷೇಪ ಇಲ್ಲದ ಪ್ರದೇಶದಲ್ಲಿ ಗುಡ್ಡ ಕುಸಿದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಆತಂಕ:

ಗುಡ್ಡ ಕುಸಿತ ಆದ ಸ್ಥಳ ಅತ್ಯಂತ ಸೂಕ್ಷ÷್ಮ ಪ್ರದೇಶ. ಕುಸಿತದ ಸ್ಥಳದಿಂದ 12 ಕಿಮೀ ಮಾರ್ಗದ ದೂರದಲ್ಲಿ ಕದ್ರಾ ಅಣೆಕಟ್ಟೆ ಇದೆ. 22 ಕಿಮೀ ದೂರದಲ್ಲಿ ಕೊಡಸಳ್ಳಿ ಅಣೆಕಟ್ಟೆ ಇದೆ. ನಾಲ್ಕೈದು ಕಿಮೀ ಏರಿಯಲ್ ಡಿನ್ಸ್ನಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರವಿದೆ. ಇದೇ ರೀತಿ ಗುಡ್ಡ ಕುಸಿತ ಸಂಭವಿಸಿದಲ್ಲಿ ಕೊಡಸಳ್ಳಿ ಅಣೆಕಟ್ಟೆ, ಕದ್ರಾ ಅಣೆಕಟ್ಟೆ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೂ ಅಪಾಯ ತಪ್ಪಿದ್ದಲ್ಲ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಹಿನ್ನೀರು ಕಾರಣವೇ..?

2022 ರಲ್ಲಿ ಕೊಡಸಳ್ಳಿ ಅಣೆಕಟ್ಟೆಯ ಅತಿ ಸಮೀಪದಲ್ಲಿ ಬಲ ಪಾರ್ಶ್ವದ ಗುಡ್ಡ ಇದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಕುಸಿದಿತ್ತು. ಮಾತ್ರವಲ್ಲ ಅಣೆಕಟ್ಟೆಯ ಎಡ ಪಾರ್ಶ್ವದ ಗುಡ್ಡ ಕೂಡ ಕುಸಿದಿತ್ತು. ಸಾಕಷ್ಟು ಕಾಡಿನ ನಡುವೆ ಹಾಗೂ ಜನವಸತಿ ಪ್ರದೇಶದಿಂದ ದೂರ ಇರುವ ಕಾರಣ ಹಲವು ದಿನ ಕುಸಿತಗಳು ಸಾರ್ವಜನಿಕರ ಗಮನಕ್ಕೇ ಬಂದಿರಲಿಲ್ಲ. ಕಳೆದ 10 ವರ್ಷಗಳಲ್ಲಿ ಕದ್ರಾ, ಕೊಡಸಳ್ಳಿ ಹಿನ್ನೀರು ಪ್ರದೇಶದಲ್ಲಿ ಹಲವೆಡೆ ಇದೇ ರೀತಿ ಕುಸಿತಗಳು ಸಂಭವಿಸುತ್ತ ಬಂದಿವೆ. ಇದರಿಂದ ಕುಸಿತಕ್ಕೆ ಹಿನ್ನೀರು ಕಾರಣವೇ ಎಂಬ ಆತಂಕವೂ ಸ್ಥಳೀಯರಲ್ಲಿದೆ. `ಈ ಬಗ್ಗೆ ವಿಸ್ತçತ ಅಧ್ಯಯನ ನಡೆಯಬೇಕು. ಸಂಬಂಧಪಟ್ಟ ಜನಪ್ರತಿನಿಽಗಳು, ಅಽಕಾರಿಗಳು ಮುನ್ನೆಚ್ಚರಿಕೆ ಕೈಗೊಳ್ಳಲು ಕ್ರಮ ವಹಿಸಬೇಕು ಎಂದು ಸ್ಥಳೀಯ ಗ್ರಾಪಂ ಸದಸ್ಯ ಶ್ಯಾಮನಾಥ ನಾಯ್ಕ ಒತ್ತಾಯಿಸಿದ್ದಾರೆ.

ಧಾರಣಾ ಸಾಮರ್ಥ್ಯ ಅಧ್ಯಯನ ಏನಾಯಿತು..?

ರಾಜ್ಯದಲ್ಲಿ ಗುಡ್ಡ ಕುಸಿತ ಹೆಚ್ಚಿರುವುದರಿಂದ ಉತ್ತರ ಕನ್ನಡ ಸೇರಿ ಪಶ್ಚಿಮ ಘಟ್ಟದ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಲಾಗುವುದು ಎಂದು ಅರಣ್ಯ ಸಚಿವ ಈಶ್ವ ಖಂಡ್ರೆ ಹೇಳಿಕೆ ನೀಡಿದ್ದರು. ಆದರೆ, ಆ ಬಗ್ಗೆ ಇದುವರೆಗೂ ಯಾವುದೇ ಕ್ರಮವಾದಂತಿಲ್ಲ. ಯಾವುದೇ ಟಿಪ್ಪಣಿ ಅಥವಾ ಸೂಚನೆ ನಮಗೆ ಬಂದಿಲ್ಲ ಎಂದು ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net