

ಹೊನ್ನಾವರ: ತಾಲೂಕಿನ ನೀಲಕೋಡದ ಶ್ರೀ ಕರಿಕಾನ ಪರಮೇಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಧಾರಾಕಾರ ಮಳೆಗೆ ಶುಕ್ರವಾರ ಭೂಕುಸಿತ ಉಂಟಾಗಿದೆ. ಪ್ರವಾಸಿಗರು ಈ ಸ್ಥಳದಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಿಕೊಂಡು ಹೋಗಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಪಕ್ಕ ಸೂಚನಾ ಫಲಕ ಅಳವಡಿಸಿ ಭೂ ಕುಸಿತದ ಜಾಗದಲ್ಲಿ ಮಣ್ಣು ತುಂಬಿ ಅಪಾಯವನ್ನು ತಪ್ಪಿಸಬೇಕಿದೆ.