ಸಾರ್ವಜನಿಕರಿಗೆ ಭೂಸುರಕ್ಷಾ ಯೋಜನೆ ಅನುಕೂಲ

taluk
Published on

ಬ್ರಹ್ಮಾವರ: ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾ ಪರಿಕಲ್ಪನೆಯಿಂದ ಬ್ಯಾಂಕ್ ವ್ಯವಹಾರ ಸಾರ್ವಜನಿಕರ ಕೈ ಬೆರಳತುದಿಗೆ ಬಂದ ಹಾಗೆ ಭೂ ದಾಖಲೆಗಳನ್ನು ರೇಕಾರ್ಡ್ ರೂಂನಿಂದ ಪಡೆಯುವ ಕಷ್ಟಕ್ಕೆ ದಾಖಲೆ ಸಂರಕ್ಷಿಸುವ ಭೂಸುರಕ್ಷಾ ಯೋಜನೆ ಮುಂದಿನ ದಿನದಲ್ಲಿ ದೇಶದ ಎಲ್ಲ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.

ಬ್ರಹ್ಮಾವರ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಕಚೇರಿ ಸರ್ವೇ ಮತ್ತು ನೋಂದಣಿ ಇಲಾಖೆ ಎಲ್ಲ ಭೂ ದಾಖಲೆಗಳ ಡಿಜಿಟಲೀಕರಣ ಭೂಸುರಕ್ಷಾವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್‌ಹೆಗ್ಡೆ ಮಾಹಿತಿ ನೀಡಿದರು. ಗ್ರೇಡ್ 2 ತಹಸೀಲ್ದಾರ್ ರಾಮಚಂದ್ರಪ್ಪ, ಉಪ ತಹಸೀಲ್ದಾರ್ ರವಿಶಂಕರ ಸಿ.ಎಂ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net