ನಾಗರಿಕರಿಗೆ ಭೂ ಸುರಕ್ಷಾ ಯೋಜನೆ ವರದಾನ

28Kdr2
Published on

ಕಡೂರು: ಶಿಥಿಲಾ ವ್ಯವಸ್ಥೆಯಲ್ಲಿರುವ ಅಗತ್ಯ ದಾಖಲೆಗಳನ್ನು ಶಾಶ್ವತವಾಗಿ ಉಳಿಸಿ

ಗಣಕೀಕೃತದ ಮೂಲಕ ದಾಖಲೆಗಳನ್ನು ಸ್ವತಃ ಆನ್‌ಲೈನ್‌ನಲ್ಲಿ ಪಡೆದುಕೊಳ್ಳಲು

ಸಹಕಾರಿಯಗುವ ಭೂ ಸುರಕ್ಷಾ ಯೋಜನೆ ನಾಗರಿಕರಿಗೆ ವರದಾನವಾಗಿದೆ ಎಂದು

ಶಾಸಕ ಕೆ.ಎಸ್.ಆನಂದ್ ಹೇಳಿದರು.

ತಾಲೂಕು ಕಚೇರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅಭಿಲೇಖಾಲಯ ಕೊಠಡಿ

ಹಾಗೂ ಭೂ ಸುರಕ್ಷಾ ಯೋಜನೆಯಡಿ ಭೂ ದಾಖಲೆಗಳ ಗಣಕೀಕರಣ ವ್ಯವಸ್ಥೆಗೆ

ಚಾಲನೆ ನೀಡಿ ಮಾತನಾಡಿ, ಕಂದಾಯ ಇಲಾಖೆಯ ಅನುದಾನದಲ್ಲಿ ಹೊಸ

ಕೊಠಡಿಗಳನ್ನು ನಿರ್ಮಿಸಲಾಗಿದೆ. ಹಳೇ ದಾಖಲಾತಿಗಳನ್ನು ಜೋಡಿಸಿಡಲು ವಿಶೇಷ

ಕಪಾಟುಗಳನ್ನು ಅಳವಡಿಸಲಾಗಿದ್ದು, ಕಂದಾಯ ಇಲಾಖೆಯ ಭೂಮಿ, ಸರ್ವೆ ಮತ್ತು

ನೊಂದಣಿಯ ಭೂ ದಾಖಲೆಗಳನ್ನು ಗಣಕೀಕೃತಗೊಳಿಸುವುದರಿಂದ ಯಾವುದೇ

ದಾಖಲೆಗಳನ್ನು ವಿಳಂಬವಿಲ್ಲದೆ ಪಡೆಯಬಹುದು ಎಂದರು.

ಸಮಸ್ಯೆಗಳನ್ನು ಮನಗಂಡ ಕಂದಾಯ ಸಚಿವರು ಪ್ರತಿ ತಾಲೂಕಿನಲ್ಲೂ ಈ ವ್ಯವಸ್ಥೆಗೆ

ಅನುಷ್ಟಾನಗೊಳಿಸಿದ್ದಾರೆ. ಜನಸಾಮಾನ್ಯರಿಗೆ ಹೆಚ್ಚು ಪ್ರಯೋಜನವಾಲಗಲು

ಕಂದಾಯ ಇಲಾಖೆಯಲ್ಲಿ ಇ-ಆಫೀಸ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯ ಮರುಗುದ್ದಿ ಮನು,ಗ್ಯಾರಂಟಿ

ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್, ಜಿಲ್ಲಾ ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್,

ಶಿರಸ್ತೇದಾರ್ ನಾಗರತ್ನ, ಲಿಂಗರಾಜು ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net