ಸ್ವಾಮೀಜಿ ಹೆಸರಿಗೆ ಭೂಮಿ ದಾನಪತ್ರ

swamiji new
Published on

ಬ್ರಹ್ಮಾವರ: ತಾಲೂಕಿನ ಕಜ್ಕೆ ಗ್ರಾಮದ ಕೃಷ್ಣಯ್ಯ ಶೆಟ್ಟಿ ಮತ್ತು ಶ್ರೀಧರ ಕಾಮತ್ ಎಂಬವರು ಕ್ರಮವಾಗಿ 1.50 ಎಕರೆ ಹಾಗೂ 50 ಸೆಂಟ್ಸ್ ಜಮೀನನ್ನು ಹಾಸನ ಜಿಲ್ಲೆಯ ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಮಹಾಸಂಸ್ಥಾನದ ಗುರು ಶಿವಸುಜ್ಞಾನ ಮೂರ್ತಿ ಸ್ವಾಮಿಯವರ ಹೆಸರಿಗೆ ಬ್ರಹ್ಮಾವರ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಶುಕ್ರವಾರ ದಾನಪತ್ರ ಮಾಡಿಕೊಟ್ಟರು.

ಈ ಭೂಮಿಯಲ್ಲಿ ವಾಸಿಸುತ್ತಿರುವವರಿಗೆ ಸಮಸ್ಯೆಗಳು ಎದುರಾದ ಹಿನ್ನೆಲೆ ಪ್ರಶ್ನಾ ಚಿಂತನೆ ನಡೆಸಿದಾಗ, ಆದಿ ಶಂಕರಾಚಾರ್ಯರು ಬಂದು ಹೋದ ಆ ಪುಣ್ಯ ಭೂಮಿಯಲ್ಲಿ ಅನ್ನಪೂರ್ಣೇಶ್ವರೀ ದೇವಿಯ ಸಾನ್ನಿಧ್ಯದ ಸ್ಥಳಕ್ಕೆ ಮಹಾ ತಪಸ್ವಿಯೊಬ್ಬರು ಬಂದಲ್ಲಿ ಮಾತ್ರ ಸಮಸ್ಯೆ ಪರಿಹಾರವಾಗುತ್ತದೆ ಎಂದು ಕಂಡು ಬಂದಿತ್ತು. ಹಿನ್ನೆಲೆಯಲ್ಲಿ ಅನೇಕ ಮಹಾಸ್ವಾಮಿಗಳನ್ನು ಭೇಟಿ ಮಾಡಿದರೂ ಫಲ ಕಂಡಿರಲಿಲ್ಲ.

ಶಿವಸುಜ್ಞಾನ ಮೂರ್ತಿ ಮಹಾಸ್ವಾಮಿಗಳ ಭೇಟಿ, ಕಳೆದ ವರ್ಷ ಚಾತುರ್ಮಾಸ್ಯ ನಂತರ ಪವಾಡದಂತೆ ಎಲ್ಲವೂ ಸುಸೂತ್ರವಾಗಿ ನಡೆದು, ಅನ್ನಪೂರ್ಣೇಶ್ವರಿ ದೇವಸ್ಥಾನ ನಿರ್ಮಾಣ ಹಂತ ತಲುಪಿದೆ. ಈ ಹಿನ್ನೆಲೆಯಲ್ಲಿ ಎರಡು ಕುಟುಂಬಗಳು ದಾನಪತ್ರ ಮಾಡಿ ಜಾಗವನ್ನು ಶ್ರೀಗಳ ಹೆಸರಿಗೆ ನೋಂದಣಿ ಮಾಡಿಸಿವೆ.

ಚೇರ್ಕಾಡಿ ಅಶೋಕ್ ಕುಮಾರ್ ಶೆಟ್ಟಿ ದಾಖಲೆ ಮತ್ತು ದಸ್ತಾವೇಜು ತಯಾರುಗೊಳಿಸಿದ್ದು, ಕಜ್ಕೆಯ ಶ್ರೀಗಳ ಶಾಖಾ ಮಠ ಮತ್ತು ಅನ್ನಪೂರ್ಣೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net