

ದೇವದುರ್ಗ: ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರ್ಕಾರ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿ ಪ್ರವಾಸಿ ಮಂದಿರದಲ್ಲಿ ಶಾಸಕ ಕೆ.ಶಿವನಗೌಡ ನಾಯಕಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬುಧವಾರ ಮನವಿ ಸಲ್ಲಿಸಿತು.
ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ 1961ಕ್ಕೆ ತಿದ್ದುಪಡಿ ತಂದು ಕಲಂ 79 ಎ,ಬಿ,ಸಿ ಮತ್ತು 63 ಹಾಗೂ 80ಅನ್ನು ತೆಗೆದು ಹಾಕಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿದೆ. ಸುಗ್ರೀವಾಜ್ಞೆ ಮೂಲಕ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಕಂದಾಯ ಸಚಿವರು ಹೇಳಿದ್ದಾರೆ. ಸದನದಲ್ಲಿ ಚರ್ಚೆಗೆ ಅವಕಾಶ ನಿಡದೇ ಏಕಪಕ್ಷಿಯವಾಗಿ ತಿದ್ದುಪಡಿ ತರಲು ಮುಂದಾಗಿದೆ . ಶಾಸಕರು ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಬೂದಯ್ಯ ಸ್ವಾಮಿ, ಪ್ರಭಾಕರ ಪಾಟೀಲ್ ಇಂಗಳದಾಳ, ಮಲ್ಲಪ್ಪಗೌಡ, ಉಮಾಪತಿಗೌಡ, ರಮೇಶ ಸುಂಕೇಶ್ವರಾಳ, ಶಿವು ಯಾದವ್, ಶರಣಪ್ಪ ಸುಂಕೇಶ್ವರಾಳ, ಮಲ್ಲೇಶಗೌಡ ಬೊಮ್ಮನಾಳ, ಲಿಂಗಪ್ಪ ಬೊಮ್ಮನಾಳ, ಉಮ್ಮಣ್ಣನಾಯಕ ಮಂದಕಲ್, ಹುಚ್ಚಪೀರ್ ಮಂದಕಲ್, ಬಸವರಾಜ ಗಬ್ಬೂರು ಇತರರು ಇದ್ದರು.