ಭೂ ದಾಖಲೆ ಸುರಕ್ಷಾ ಯೋಜನೆಗೆ ಚಾಲನೆ

LAND RECORD
Published on

ರೋಣ: ಹಳೆಯ ದುಃಸ್ಥಿತಿಯಲ್ಲಿದ್ದ ಭೂ ದಾಖಲೆಗಳನ್ನು ತಂತ್ರಾಂಶ ಬಳಸಿಕೊಂಡು ಡಿಜಿಟಲ್ ಮಾಧ್ಯಮದಿಂದ ಜನರಿಗೆ ಸುಲಭ ರೀತಿಯಲ್ಲಿ ದೊರೆಯುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದ್ದು ಇದು ಜನಸಾಮಾನ್ಯರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಭೂ ಸುರಕ್ಷಾ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಯೋಜನೆಯ ಮೂಲಕ ಹಳೆಯ ದಾಖಲೆಗಳನ್ನು ತಿದ್ದಲು, ಕಳ್ಳತನ ಮಾಡಲು ಬರುವುದಿಲ್ಲ. ಹೀಗಾಗಿ ರೈತರಿಗೆ, ಜನ ಸಾಮಾನ್ಯರಿಗೆ ತುಂಬಾ ಅನುಕೂಲವಾಗಲಿದ್ದು ಅಂಗೈಯಲ್ಲಿ ಜನರಿಗೆ ತಮ್ಮ ದಾಖಲೆಗಳು ದೊರೆಯಲಿವೆ’ ಎಂದರು.

ವಿ.ಬಿ. ಸೋಮನಕಟ್ಟಿಮಠ, ತಹಸೀಲ್ದಾರ್ ನಾಗರಾಜ ಕೆ, ಉಪ ತಹಸೀಲ್ದಾರ್ ಗಣೇಶ ಕೊಪ್ಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net