

ಮೈಸೂರು: ಜಿಲ್ಲಾಡಳಿತ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಸುಮಾರು 15 ಕೋಟಿ ರೂ. ಬೆಲೆಬಾಳುವ ಜಮೀನು ಭೂಗಳ್ಳರಿಂದ ರಕ್ಷಿಸಲಾಗಿದೆ.
ಅಕ್ರಮವಾಗಿ ಒತ್ತುವರಿಯಾಗಿದ್ದ ವರುಣ ಹೋಬಳಿ ಹಾರೋಹಳ್ಳಿ ಸರ್ವೇ ಸಂಖ್ಯೆ 274 ರಲ್ಲಿರುವ 10.28 ಎಕರೆ ಒತ್ತುವರಿಯಾಗಿದ್ದ ಭೂಮಿಯನ್ನು ತೆರವುಗೊಳಿಸಲಾಗಿದೆ.
ಗ್ರಾಮದ ನಾಲ್ವರು ಜಮೀನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ತೆರವು ಕಾರ್ಯ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದರು. ಉಪ ವಿಭಾಗಾಧಿಕಾರಿ ಕೆ.ಆರ್.ರಕ್ಷಿತ್ ಅವರ ಆದೇಶ ಮೇರೆಗೆ ತಹಸೀಲ್ದಾರ್ ಮಹೇಶ್‌ಕುಮಾರ್ ನೇತೃತ್ವದಲ್ಲಿ ತೆರವು ಕಾರ್ಯ ನಡೆಸಲಾಯಿತು.
ಬಿಗಿ ಬಂದೋಬಸ್ತ್‌ನಲ್ಲಿ ಉಪ ತಹಸೀಲ್ದಾರ್ ಲತಾ.ಜೆ ಶರಣಮ್ಮ, ತಾಲೂಕು ಸೂಪರ್‌ವೈಸರ್ ಪ್ರವೀಣ್, ತಾಲೂಕು ಭೂಮಾಪಕರಾದ ವೆಂಕಟೇಶ್, ಮಹದೇವಸ್ವಾಮಿ, ಎಂ. ಮಹದೇವಸ್ವಾಮಿ, ರಾಜಸ್ವ ನಿರೀಕ್ಷಕರಾದ ಡಿ.ಎಸ್.ಶಂಕರ್, ಗ್ರಾಮ ಆಡಳಿತಾಧಿಕಾರಿಗಳಾದ ಅಬ್ದುಲ್ ರಶೀದ್, ಚಂದ್ರಮೌಳೇಶ್ವರ, ಮುಖೇಶ್, ಮಾರುತಿ ನಾಯಕ್, ಹೇಮಂತ್‌ಕುಮಾರ್ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.