

ರಾಣೆಬೆನ್ನೂರ: ಜಮೀನಿನಲ್ಲಿ ಪಂಪಸೆಟ್ ದುರಸ್ತಿ ಮÁಡಲು ಹೋದ ತಂದೆ-ಮಗ ವಿದ್ಯುತ್ ತಗುಲಿ ಸ್ಥಳದಲ್ಲಿಯೆ ಮೃತಪಟ್ಟ ಹೃದಯ ವಿದ್ರಾವಕ ಘಟನೆ ತಾಲೂಕಿನ ಪತ್ತೇಪುರ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಗ್ರಾಮದ ಕರಬಸಪ್ಪ ಭೀಮಪ್ಪ ಕಡೇನಾಯಕನಹಳ್ಳಿ (೫೫) ಹಾಗೂ ಇವರ ಪುತ್ರ ದರ್ಶನ ಕರಬಸಪ್ಪ ಕಡೇನಾಯಕನಹಳ್ಳಿ (೨೨) ಮೃತಪಟ್ಟ ದುರ್ದೈವಿಗಳು.
ಇವರು ಗ್ರಾಮದ ಹೊರಭಾಗದಲ್ಲಿದ್ದ ಜಮೀನಿನಲ್ಲಿ ಭತ್ತದ ಬೆಳೆಗೆ ನೀರು ಹಾಯಿಸುವ ಸಲುವಾಗಿ ತುಂಗಭದ್ರಾ ನದಿ ಬಳಿಯ ಇಟ್ಟಿದ್ದ ನೀರಿನ ಪಂಪಸೆಟ್‌ನ ಸ್ಟಾರ್ಟ್ ಮÁಡಲು ಮೊದಲಿಗೆ ಪುತ್ರ ದರ್ಶನ ಹೋಗಿದ್ದಾನೆ. ಆತನಿಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಒದ್ದಾಡತೊಡಗಿದ್ದಾನೆ. ಇದನ್ನು ಗಮನಿಸಿದ ತಂದೆ ಕರಬಸಪ್ಪ ಮಗನನ್ನು ರಕ್ಷಿಸಲು ಹೋದಾಗ ಅವರಿಗೂ ವಿದ್ಯುತ್ ತಗುಲಿದೆ. ಇದರಿಂದ ಸ್ಥಳದಲ್ಲಿಯೆ ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನಾ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.