ಮೋಟರ್​ ಚಾಲೂ ಮಾಡಲು ಹೋದ ರೈತ ವಿದ್ಯುತ್​ ತಗುಲಿ ಸಾವು

Crime Logo
Published on

ರಾಣೆಬೆನ್ನೂರ: ಜಮೀನಿನಲ್ಲಿ ನೀರು ಹಾಯಿಸಲು ಮೋಟರ್​ ಚಾಲೂ ಮಾಡಲು ಹೋದ ರೈತ ವಿದ್ಯುತ್​ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಮಾಕನೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಂಜಪ್ಪ ಶಿವನಗೌಡ ಭರಮಗೌಡ್ರ (51) ಮೃತ ರೈತ.
ಇವರು ಜಮೀನಿನಲ್ಲಿ ನೀರು ಹಾಯಿಸುವ ಸಲುವಾಗಿ ನೀರಿನ ಮೋಟರ್​ ಚಾಲೂ ಮಾಡಲು ಹೋದಾಗ ವಿದ್ಯುತ್​ ತಗುಲಿದೆ. ಇದರಿಂದ ರೈತ ಮಂಜಪ್ಪ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಕುಮಾರಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net