ವಕ್ಫ್ ಬೋರ್ಡ್‌ನಿಂದ ಲ್ಯಾಂಡ್ ಜಿಹಾದ್; ಸಚಿವೆ ಶೋಭಾ ಕರಂದ್ಲಾಜೆ

shobhaaa
Published on

ವಿಜಯಪುರ: ರಾಜ್ಯದಲ್ಲಿ ವಕ್ಫ್ ಬೋರ್ಡ್‌ನಿಂದ ಲ್ಯಾಂಡ್ ಜಿಹಾದ್ ನಡೆದಿದೆ. ಇದೊಂದು ರೀತಿ ಲ್ಯಾಂಡ್ ಟೆರ‌್ರರ‌್ರಿಸಂ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ವಕ್ಫ್ ಆಸ್ತಿ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಸಾಥ್ ನೀಡಲು ಆಗಮಿಸಿದ ಶೋಭಾ ಕರಂದ್ಲಾಜೆ ಸೋಮವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

ವಕ್ಫ್ ಬೋರ್ಡ್ ಲ್ಯಾಂಡ್ ಭಯೋತ್ಪಾದನೆ ಮಾಡ್ತಿದೆ. ಇದನ್ನು ಬಿಜೆಪಿ ಸಹಿಸಲ್ಲ. 1974 ವಕ್ಫ್ ನೋಟಿಪಿಕೇಶನ್ ರದ್ದಾಗಬೇಕು. ಅದಕ್ಕಾಗಿ ಹೋರಾಟ ನಡೆಸಲಾಗುವುದು ಎಂದರು.

ರಾಜ್ಯದಲ್ಲಿ ಎಲ್ಲಿ ನೋಡಿದ್ರೂ ವಕ್ಫ್‌ಮಯವಾಗಿದೆ. ಹಿಂದು ದೇವಾಲಯಗಳು, ಮಠ-ಮಾನ್ಯಗಳು, ರೈತ ಜಮೀನು ಒಂದೂ ಉಳಿದಿಲ್ಲ. ಉಡುಪಿಯಲ್ಲಿ ಸುಲ್ತಾನಪುರ ಅಂತಾ ಒಂದು ಹಳ್ಳಿಯನ್ನೇ ನಿರ್ಮಾಣ ಮಾಡಿದ್ದಾರೆ. ‘ದಿಶಾಂಕ ಆಪ್’ನಲ್ಲಿ ಹಿಂದು ಹಳ್ಳಿ ಸುಲ್ತಾನಪುರ ಎಂದು ತೋರಿಸುತ್ತಿದೆ. ಇದೆಲ್ಲ ನೋಡಿದರೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಏನು ಮಾಡಲು ಹೊರಟಿದೆ ಎಂಬ ಭಯ ಕಾಡುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net