ವಕ್ಫ್ ಬೋರ್ಡ್‌ನಿಂದ ಭೂ ಜಿಹಾದ್

Ramu naik
Published on

ಯಲ್ಲಾಪುರ: ದೇವಸ್ಥಾನ ಜಾಗ ಕಬಳಿಸುವ ಮೂಲಕ ವಕ್ಫ್ ಬೋರ್ಡ್ ಭೂ ಜಿಹಾದ್ ಮಾಡುತ್ತಿದೆ. ಇದನ್ನು ತಾಲೂಕಿನ ಎಲ್ಲ ಹಿಂದು ಸಂಘಟನೆಗಳ ಪರವಾಗಿ ಖಂಡಿಸುತ್ತೇವೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ಆರಂಭದಲ್ಲಿ 13000 ಎಕರೆ ಕೃಷಿ ಭೂಮಿಯನ್ನು ವಿಜಯಪುರದಲ್ಲಿ ಕಬಳಿಸಲು ಬೋರ್ಡ್ ಮುಂದಾಗಿದೆ. ನಂತರ ಬೇರೆ ಜಿಲ್ಲೆಗಳಿಗೂ ವ್ಯಾಪಿಸುತ್ತ ಸಾಗಿದೆ. ಇದೀಗ ಮಠ ಮಂದಿರಗಳ ಮೇಲೂ ವಕ್ಫ್ ಬೋರ್ಡ್ ವಕ್ರದೃಷ್ಟಿ ಬಿದ್ದಿದೆ. ಮುಸಲ್ಮಾನರು ಭಾರತಕ್ಕೆ ಬರುವ ಪೂರ್ವದ ದೇವಸ್ಥಾನಗಳೂ ತಮ್ಮದು ಎಂದು ವಕ್ಫ್ ಬೋರ್ಡ್ ಹೇಳುತ್ತಿರುವುದು ಹಾಸ್ಯಾಸ್ಪದ. ಇದು ಹಿಂದುಗಳ ಮೇಲಿನ ಆಕ್ರಮಣದ ಉದ್ದೇಶ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಮ್ಮೆ ಇದಕ್ಕೆ ಒಪ್ಪಿದರೆ ಇಡೀ ರಾಜ್ಯವನ್ನೇ ವಶಪಡಿಸಿಕೊಳ್ಳುತ್ತಾರೆ. ವಕ್ಫ್ ಬೋರ್ಡ್ ಹಕ್ಕು, ಅಧಿಕಾರಿಗಳ ಬಗೆಗಿನ ನಿಯಮಗಳನ್ನು ಬದಲಿಸಬೇಕಾದ ಅಗತ್ಯವಿದೆ. ವಕ್ಫ್ ಮಂಡಳಿಯನ್ನೇ ರದ್ದು ಮಾಡಬೇಕು. ದೇಶದ ಭೂಮಿಯನ್ನು ರಕ್ಷಿಸಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.

ವಿಹಿಂಪ ಅಧ್ಯಕ್ಷ ಗಜಾನನ ನಾಯ್ಕ, ಮಹಿಳಾ ಘಟಕದ ಶ್ಯಾಮಿಲಿ ಪಾಟಣಕರ್, ಅನಂತ ಗಾಂವ್ಕರ ಕಂಚೀಪಾಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net