

ಹಾನಗಲ್ಲ: ಭತ್ತದ ಹುಲ್ಲಿನ ಪೆಂಡಿ ಕಟ್ಟುತ್ತಿದ್ದ ಸಮಯದಲ್ಲಿ ಹಾವು ಕಚ್ಚಿ ರೈತರೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಶ್ಯಾಡಗುಪ್ಪಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮೂಕಪ್ಪ ಹನುಮಂತಪ್ಪ ಮಕರವಳ್ಳಿ (30) ಮೃತ ರೈತ.
ಇವರು ಜಮೀನಿನಲ್ಲಿ ಭತ್ತದ ಹುಲ್ಲಿನ ಪೆಂಡಿ ಕಟ್ಟುತ್ತಿದ್ದ ಸಮಯದಲ್ಲಿ ಹಾವು ಕಚ್ಚಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.