

ಹಿರೇಕೆರೂರ: ಜಮೀನಿನಲ್ಲಿ ಶೀಗೆ ಹುಣ್ಣಿಮೆ ನಿಮಿತ್ತ ಪೂಜೆ ಮಾಡುತ್ತಿದ್ದ ರೈತರೊಬ್ಬರು ಹಿಮ್ಮುಖವಾಗಿ ಬಿದ್ದ ಪರಿಣಾಮ ಸ್ಥಳದಲ್ಲಿಯೆ ಮೃತಪಟ್ಟ ಟನೆ ತಾಲೂಕಿನ ಶಿರಗಂಬಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಹನುಮಂತಪ್ಪ ಚನ್ನಬಸಪ್ಪ ಮುದ್ದಣ್ಣನವರ (32) ಮೃತ ರೈತ.
ಇವರು ಶೀಗೆ ಹುಣ್ಣಿಮೆ ನಿಮಿತ್ತ ಜಮೀನಿನಲ್ಲಿ ಪೂಜೆ ಮಾಡುತ್ತಿದ್ದ ಸಮಯದಲ್ಲಿ ಏಕಾಏಕಿ ಮಳೆ ಬಂದಿದೆ. ಇದರಿಂದ ಗಾಯಗೊಂಡ ಅವರು ಹಿಮ್ಮುಖವಾಗಿ ಬಿದಿದ್ದಾರೆ. ಆಗ ತಲೆಗೆ ಪೆಟ್ಟು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.