ಜಮೀನು ಒತ್ತುವರಿ ತೆರವುಗೊಳಿಸಲು ಆಗ್ರಹ

16Kagavad3
Published on

ಕಾಗವಾಡ: ತಾಲೂಕಿನ ಜುಗೂಳ ಗ್ರಾಮದ ಎಸ್‌ಸಿ ಸಮುದಾಯದ ಜಮೀನುಗಳ ಒತ್ತುವರಿ ತೆರವಿಗೆ ಆಗ್ರಹಿಸಿ ದಲಿತ ಸಮುದಾಯದವರು ಜುಗೂಳ-ಶಹಾಪುರ ರಸ್ತೆ ಸಂಚಾರ ತಡೆ ನಡೆಸಿ ಗುರುವಾರ ಪ್ರತಿಭಟಿಸಿದರು.

ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ರಾಜೇಶ ಬುರ್ಲಿ ಮನವಿ ಸ್ವೀಕರಿಸಿ, ಒತ್ತುವರಿ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಎಸ್‌ಸಿ ಸಮುದಾಯದವರ ಜಮೀನು ಒತ್ತುವರಿ ಮಾಡಿ, ರಸ್ತೆ ನಿರ್ಮಿಸಿಕೊಂಡವರ ಮೇಲೆ ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿ ಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕಾಗವಾಡ ಪಿಎಸ್‌ಐ ಜಿ.ಜಿ.ಬಿರಾದರ, ಕಂದಾಯ ನಿರೀಕ್ಷಕ ಎಸ್.ಡಿ.ಮುಲ್ಲಾ, ಪಿಡಿಒ ಶೈಲಶ್ರೀ ಭಜಂತ್ರಿ, ಸುಭಾಷ ಬಶೆಟ್ಟಿ, ದಲಿತ ಮುಖಂಡರಾದ ಮಹಾದೇವ ಕಾಂಬಳೆ, ಪ್ರತಾಪ ಕಾಂಬಳೆ, ಮಹಾವೀರ ಕಾಂಬಳೆ, ತುಕಾರಾಮ ಕಾಂಬಳೆ, ನಾರಾಯನ ಮಾನೆ, ರಾಜು ಹಿರೇಮನಿ, ಗೋಪಾಲ ಕಾಂಬಳೆ, ಶಂಕರ ಕಾಂಬಳೆ, ಸತೀಶ ಚಾವರೆ, ಹೇಮಂತ ಹಿರೇಮನಿ, ಪ್ರಮೋದ ಕಾಂಬಳೆ, ವಿನೋದ ಹಿರೇಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net