ಅಕೇಶಿಯಾ ನೆಡುತೋಪು ನಾಶಪಡಿಸಿ ಭೂಮಿ ಒತ್ತುವರಿ

4 RPT 1
ಕುಕ್ಕಳಲೆ ಗ್ರಾಮದಲ್ಲಿ ಅಕೇಶಿಯಾ ನೆಡುತೋಪನ್ನು ನಾಶ ಮಾಡಿ, ಶೆಡ್ ನಿರ್ಮಿಸಿ ಅಡಕೆ ಗಿಡಗಳನ್ನು ನೆಟ್ಟಿರುವುದು.
Published on

ರಿಪ್ಪನ್‌ಪೇಟೆ: ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಕಳಲೆ ಗ್ರಾಮದಲ್ಲಿ ನಿರ್ಮಿಸಿದ್ದ ಅಕೇಶಿಯಾ ನೆಡುತೋಪನ್ನು ಅಕ್ರಮವಾಗಿ ನಾಶ ಮಾಡಿ, ಕಂದಾಯ ಇಲಾಖೆಗೆ ಸೇರಿದ ಭೂಮಿಯನ್ನು ಒತ್ತುವರಿ ಮಾಡಲಾಗಿದೆ.

ಗ್ರಾಮದ ಸರ್ವೇ ನಂ.13ರಲ್ಲಿ 6 ಎಕರೆ ಜಾಗದಲ್ಲಿ ಗ್ರಾಮಾಡಳಿತವು 2012-13ನೇ ಸಾಲಿನಲ್ಲಿ ಅರಣ್ಯೀಕರಣ ಯೋಜನೆಯಡಿ ಅಕೇಶಿಯಾ ಗಿಡಗಳನ್ನು ನೆಟ್ಟು ಪೋಷಿಸಲಾಗಿತ್ತು. 2022-23ನೇ ಸಾಲಿನಲ್ಲಿ ಇಂಗುಗುಂಡಿ ನಿರ್ಮಿಸಲಾಗಿತ್ತು. ಇದರಲ್ಲಿಯೇ ಸುಮಾರು 2 ಎಕರೆ ಜಾಗವನ್ನು ಸ್ಮಶಾನ ಹಾಗೂ ಗ್ರಾಮಸ್ಥರ ಉಪಯೋಗಕ್ಕಾಗಿ ಕಾಯ್ದಿರಿಸಿಕೊಳ್ಳಲಾಗಿತ್ತು.
ಆದರೆ ಕುಕ್ಕಳಲೆ ಗ್ರಾಮದ ಕೆಲವರು ನಾಡು ತೋಪು ನಾಶ ಮಾಡಿ ಸ್ಥಳವನ್ನು ಒತ್ತುವರಿ ಮಾಡಿಕೊಂಡು, ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿದ್ದಾರೆ. ಬೆಳೆದು ನಿಂತ ಅಕೇಶಿಯಾ ಮರಗಳನ್ನು ಕಡಿದು, ಸುಟ್ಟು, ಜಾಗವನ್ನು ಸಮತಟ್ಟುಗೊಳಿಸುವ ಕಾರ್ಯ ಮಾಡಿದ್ದಾರೆ. ಅಡಕೆ ಗಿಡಗಳನ್ನು ನೆಡಲಾಗಿದೆ. ಈ ಮೂಲಕ ಸುತ್ತಮುತ್ತಲಿನ 10-15 ಎಕರೆ ಅರಣ್ಯವಿರುವ ಕಂದಾಯ ಭೂಮಿ ಕಬಳಿಕೆಯ ಹುನ್ನಾರ ನಡೆಸಲಾಗಿದೆ. ಸಂಬಂಧ ಪಟ್ಟ ಕಂದಾಯ, ಅರಣ್ಯ, ಗ್ರಾಮಾಡಳಿತ ಅಧಿಕಾರಿಗಳು ಕೂಡಲೆ ಒತ್ತುವರಿ ತೆರವುಗೊಳಿಸಿ ಗ್ರಾಮಾಭಿವೃದ್ಧಿಗಾಗಿ ಜಾಗವನ್ನು ಉಳಿಸಿಬೇಕಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಒತ್ತುವರಿ ಮಾಡಲಾಗಿದೆ ಎನ್ನಲಾದ ಸ್ಥಳ ಮಹಜರು ಮಾಡಿ, ತಾಲೂಕು ಆಡಳಿತಕ್ಕೆ ವರದಿ ಸಲ್ಲಿಸಲಾಗಿದೆ. ತಹಸೀಲ್ದಾರ್ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ಳಲಾಗುವುದು.ಹುಚ್ಚರಾಯಪ್ಪ, ಉಪ ತಹಸೀಲ್ದಾರ್

ಸರ್ಕಾರಿ ಜಾಗ ಒತ್ತುವರಿ ಬಗ್ಗೆ ಕುಕ್ಕಳಲೆ ಗ್ರಾಮಸ್ಥರಿಂದ ಮಾಹಿತಿ ಬಂದಿದೆ. ಒತ್ತುವರಿದಾರರ ವಿರುದ್ಧ ಕ್ರಮವಹಿಸಿ ಜಾಗ ಉಳಿಸಿ ಕೊಡುವಂತೆ ಉಪ ತಹಸೀಲ್ದಾರ್, ತಾಪಂ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ.ಭರತ್, ಬಾಳೂರು ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net