ಜಮೀನಿನ ವಿವಾದ, ಮಾರ್ಕೆಟ್ ಲೋಕಿ ಹೆಸರಲ್ಲಿ ಬೆದರಿಕೆ

tunga nagar police station
ತುಂಗಾನಗರ ಠಾಣೆ
Published on

ಶಿವಮೊಗ್ಗ: ಜಮೀನಿನ ವಿವಾದವನ್ನು ಸೆಟ್ಲಮೆಂಟ್ ಮಾಡಿಕೊಳ್ಳುವಂತೆ ವ್ಯಕಿಯೊಬ್ಬರಿಗೆ ರೌಡಿಶೀಟರ ಮಾರ್ಕೆಟ್ ಲೋಕಿ ಹೆಸರಲ್ಲಿ ಬೆದರಿಕೆ ಕರೆ ಬಂದಿದೆ. ಗೋಪಾಳದ ಹರೀಶ್ ಎಂಬುವರು ಬೆದರಿಕೆ ಬಂದಿದ್ದು ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ.

ಸಾಗರ ರಸ್ತೆಯಲ್ಲಿ ಹರೀಶ್ ಕುಟುಂಬಕ್ಕೆ ಸೇರಿದ ಅರ್ಧ ಎಕರೆ ಜಮೀನಿನ ವಿವಾದ ನ್ಯಾಯಾಲಯದಲ್ಲಿದೆ. ಇದೇ ವಿಚಾರವಾಗಿ ಕೋರ್ಟ್‌ನಿಂದ ಕೇಸ್ ವಾಪಸ್ ತೆಗೆದುಕೊಳ್ಳುಂತೆ ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿರುವ ಮಾರ್ಕೆಟ್ ಲೋಕಿ ಹೆಸರಲ್ಲಿ ಹರೀಶ್ ಅವರಿಗೆ ಹಲವು ಬಾರಿ ವಾಟ್ಸ್‌ಆ್ಯಪ್ ಕರೆಬಂದಿದೆ.
ಕೇಸ್ ಹಿಂಪಡೆದಿದ್ದರೆ ತಲೆ ಉರುಳುತ್ತದೆ ಎಂದು ಧಮ್ಕಿ ಕೂಡ ಹಾಕಲಾಗಿದೆ. ಅಲ್ಲದೆ, ಹುಡುಗರನ್ನು ಕಳುಹಿಸಿ ಬೆದರಿಕೆ ಕೂಡ ಹಾಕಿದ್ದಾನೆ. ಈ ಸಂಬಂಧ ಮಾರ್ಕೆಟ್ ಲೋಕಿ ಸೇರಿ ಹಲವರ ಮೇಲೆ ಕೇಸ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net