ಜಮೀನು ವಿವಾದ, ಯೋಧನಿಗೆ ಗಾಯ

Police Cap
Published on

ಕೊಕಟನೂರ: ಜಮೀನಿನ ಸೀಮೆ ವಿಷಯವಾಗಿ ಎರಡು ಕುಟುಂಬಗಳ ನಡುವೆ ಉಂಟಾದ ಘರ್ಷಣೆಯಲ್ಲಿ ಯೋಧ ಗಾಯಗೊಂಡ ಘಟನೆ ಅಥಣಿ ತಾಲೂಕಿನ ಅನಂತಪುರ ಗ್ರಾಮದ ಸರಹದ್ದಿನ ಕರೋಲಿ ಜಮೀನಿನಲ್ಲಿ ಮಂಗಳವಾರ ನಡೆದಿದೆ.

ರಜೆಯ ಮೇಲೆ ಸ್ವ ಗ್ರಾಮಕ್ಕೆ ಆಗಮಿಸಿದ್ದ ಶಿವಾನಂದ ರೇವಪ್ಪ ಕರೋಲಿ ಗಾಯಗೊಂಡ ಯೋಧ. ಯೋಧನ ಜಮೀನ ಪಕ್ಕ ಪಾಟೀಲ ಕುಟುಂಬಸ್ಥರ ಜಮೀನು ಇದ್ದು, ಸೀಮೆ ವಿಷಯವಾಗಿ ಶಿವಾನಂದ ಹಾಗೂ ಪಾಟೀಲ ಕುಟುಂಬಸ್ಥರ ನಡುವೆ ಮಾತಿಗೆ ಮಾತು ಬೆಳೆದಿತ್ತು.

ಈ ವೇಳೆ ಬಸನಗೌಡ ಭೀಮನಗೌಡ ಪಾಟೀಲ, ರಮೇಶ ಬಸನಗೌಡ ಪಾಟೀಲ ಹಾಗೂ ರುದ್ರಗೌಡ ಬಸನಗೌಡ ಪಾಟೀಲ ಎಂಬುವರು ಸೇರಿ ಯೋಧ ಶಿವಾನಂದ ಅವರನ್ನು ಕಟ್ಟಿಗೆಯಿಂದ ಹೊಡೆದಿದ್ದರು. ಅಥಣಿ ಪೊಲೀಸ್ ಠಾಣೆಯಲ್ಲಿ ಬಸನಗೌಡ, ರಮೇಶ ಹಾಗೂ ರುದ್ರಗೌಡ ಸೇರಿ ಹಲ್ಲೆ ಮಾಡಿದ್ದಾರೆಂದು ಪ್ರಕರಣ ದಾಖಲಾಗಿದೆ. ಗಾಯಾಳು ಶಿವಾನಂದ ಅವರನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net