ಜಡಿಮಳೆಗೆ ಉಪ್ಪಿನಬೆಟಗೇರಿಯಲ್ಲಿ ನೆಲ ಕುಸಿತ

land collapse
Published on

ಉಪ್ಪಿನಬೆಟಗೇರಿ: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಜಡಿಮಳೆಯಿಂದಾಗ ಗ್ರಾಮದ ಈಶ್ವರ ಕಬ್ಬೂರ ಎಂಬುವವರ ಮನೆ ಮುಂದೆ ಗುರುವಾರ ರಾತ್ರಿ ನೆಲ ಕುಸಿದು 15 ರಿಂದ 20 ಅಡಿ ಆಳದ ಗುಂಡಿ ಬಿದ್ದಿದೆ.

ರಾತ್ರಿ 10 ಗಂಟೆಗೆ ಮೇಲ್ಛಾವಣಿಯಿಂದ ಬೀಳುತ್ತಿದ್ದ ನೀರನ್ನು ಪಾತ್ರೆಗಳಲ್ಲಿ ತುಂಬುತ್ತಿರುವಾಗ ಏಕಾಏಕಿ ನೆಲ ಕುಸಿದು ದೊಡ್ಡ ಗುಂಡಿ ಬಿದ್ದಿದ್ದು ಈಶ್ವರ ಅವರು ಸ್ವಲ್ಪದರಲ್ಲಿಯೇ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದಾಗಿ ಕುಟುಂಬದವರಲ್ಲಿ ಆತಂಕ ಮೂಡಿಸಿದೆ.

ಇದು ಪೂರ್ವಜರು ದವಸ ಧಾನ್ಯಗಳನ್ನು ಸಂಗ್ರಹಿಸಿಡಲೆಂದು ತೆಗೆಯಲಾದ ಹಗೆ ಇರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಹಗೆ ಇರುವ ಬಗ್ಗೆ ಯಾವುದೇ ಕುರುಹು ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಗ್ರಾಮ ಪಂಚಾಯಿತಿ ಸದಸ್ಯ ಬಶೀರ ಅಹ್ಮದ ಮಾಳಗಿಮನಿ ಹಾಗೂ ಸಿಬ್ಬಂದಿ ಫಕ್ಕೀರಪ್ಪ ಶಿವಳ್ಳಿ ಅವರು ಸ್ಥಳ ಪರಿಶೀಲಿಸಿದ್ದು ಶೀಘ್ರವೇ ಗುಂಡಿ ಮುಚ್ಚಿಸಲಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net