ದೇವಸಮುದ್ರದಲ್ಲಿ ನಾಡಬಾಂಬ್ ಪತ್ತೆ

dj mlk bomb
Published on

ಮೊಳಕಾಲ್ಮೂರು: ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ ಕಾಡುಹಂದಿ ಬೇಟೆಯಾಡಲು ಸಂಗ್ರಹಿಸಿದ್ದ 81 ನಾಡಬಾಂಬ್‌ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ದೇವಸಮುದ್ರ ಗ್ರಾಮದ ವಾಸಿ ಸುವನ್, ಅನಂತಪುರ ಜಿಲ್ಲೆಯ ಶಿಕಾರಿ ಗಂಗಣ್ಣ ಬಂಧಿತರು. ನಾಡಬಾಂಬ್‌ಗಳನ್ನ ಮಂಗಳವಾರ ನಿರ್ಜನ ಪ್ರದೇಶದಲ್ಲಿ ನಿಷ್ಕ್ರೀಯಗೊಳಿಸಲಾಯಿತು.

ಕಾಡುಹಂದಿ ಬೇಟೆಯಾಡಲು ನಾಡಬಾಂಬ್‌ಗಳನ್ನು ಬಳಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಜೂ.30ರಂದು ಕಾರ್ಯಚರಣೆ ನಡೆಸಿದ ಪೊಲೀಸರು, ಆರೋಪಿಗಳ ಪತ್ತೆ ಕಾರ್ಯಕೈಗೊಂಡಿದ್ದರು.

ಅನಂತಪುರದಿಂದ ನಾಡಬಾಂಬ್‌ಗಳನ್ನ ತಂದು ಕಳೆದ ನಾಲ್ಕಾರು ತಿಂಗಳಿಂದ ಈ ಕೃತ್ಯದಲ್ಲಿ ಬಾಗಿಯಾಗಿರುವ ಬಗ್ಗೆ ವಿಚಾರಣೆ ವೇಳೆ ಬಂಧಿತರು ಬಾಯಿಬಿಟ್ಟಿದ್ದಾರೆ.

ಸಿಪಿಐ ಎನ್.ಸತೀಶ್, ಎಎಸ್‌ಐ ರಾಂಘವೇಂದ್ರರಡ್ಡಿ ಇತರರಿದ್ದರು. ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net