ಬಗರ್ ಹುಕುಂ ಅಡಿ ಫಲಾನುಭವಿಗಳಿಗೆ ಭೂಮಿ ಮಂಜೂರಿ

23kmt3_Bagar Hukum
Published on

ಕುಮಟಾ: ಇಲ್ಲಿನ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕಚೇರಿ ಮೀಟಿಂಗ್ ಹಾಲ್​ನಲ್ಲಿ ಇತ್ತೀಚೆಗೆ ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಬಗರ್ ಹುಕುಂ ಸಮಿತಿಯ ಸಭೆಯಲ್ಲಿ ಫಲಾನುಭವಿಗಳಿಗೆ ಭೂ ಹಂಚಿಕೆ ಕುರಿತು ರ್ಚಚಿಸಿ ನಿರ್ಣಯಿಸಲಾಯಿತು. ಬಳಿಕ ಫಲಾನುಭವಿಗಳಿಗೆ ಭೂ ಮಂಜೂರಿ ಕುರಿತು ಮಾಹಿತಿ ನೀಡಲಾಯಿತು.

ಸಭೆಯಲ್ಲಿ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಬಗರ್ ಹುಕುಂ ಸಮಿತಿಯಲ್ಲಿ ಒಟ್ಟು 6 ಅರ್ಜಿಗಳಿಗೆ ಮಂಜೂರಿ ನೀಡಲಾಯಿತು. ಮಳವಳ್ಳಿಯ ಶೇಖರ ದೇವು ಗೌಡ (1 ಎಕರೆ 25 ಗುಂಟೆ), ಗೋಪಾಲ ಮಾಬ್ಲು ಗೌಡ (1ಎಕರೆ 20ಗುಂಟೆ), ಕುಸುಮಾಕರ ನಾರಾಯಣ ಗೌಡ (1ಎಕರೆ 20 ಗುಂಟೆ), ನಾರಾಯಣ ಜೋಗಿ ಗೌಡ (1 ಎಕರೆ 20ಗುಂಟೆ), ದೀವಳ್ಳಿಯ ಮಹಾದೇವಿ ನಾಯ್ಕ (1ಎಕರೆ), ಕೃಷ್ಣ ಲಿಂಗಪ್ಪ ನಾಯ್ಕ (1ಎಕರೆ) ಮಂಜೂರಿ ನೀಡಲಾಯಿತು. ಸಭೆಯಲ್ಲಿ ಬಗರ್ ಹುಕುಂ ಸಮಿತಿ ಸದಸ್ಯರಾದ ಶ್ರೀಧರ ಕಲಗದ್ದೆ, ಪ್ರೇಮ ನಾಯ್ಕ, ಕುಮಾರ ಭಟ್, ತಹಸೀಲ್ದಾರ್ ಸತೀಶ ಗೌಡ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net