ಆರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು

mbl.....
Published on

ಮುಳಬಾಗಿಲುಳ: ತಾಲೂಕಿನಲ್ಲಿ ಭೂ ಮಂಜೂರಾತಿಗಾಗಿ ಅರ್ಜಿ ಹಾಕಿರುವ ರೈತರ ಸ್ಥಳ ಪರಿಶೀಲನೆ ನಡೆಸಿ ನೈಜ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ಭೂಮಿಯನ್ನು ಪಾರದರ್ಶಕವಾಗಿ ಮಂಜೂರಾತಿ ಮಾಡುವ ಮೂಲಕ ಮಾದರಿಯಾಗಿ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಭೂ ಮಂಜೂರಾತಿ ಸಮಿತಿ ಅಧ್ಯಕ್ಷ, ಶಾಸಕ ಸಮೃದ್ಧಿ ವಿ.ಮಂಜುನಾಥ್​ ಹೇಳಿದರು.

ತಾಲೂಕಿನ ಅವನಿ ಹೋಬಳಿ ರಾಮೇನಲ್ಲೂರು, ರಾಮರಾಯನಕೋಟೆ, ಮಜರಾ ಅತ್ತಿಕುಂಟೆ ಮತ್ತಿತರ ಗ್ರಾಮಗಳ ಅರ್ಜಿ ಸಲ್ಲಿಸಿರುವ ರೈತರ ಹೊಲಗಳಿಗೆ ದರಖಾಸ್ತು ಸಮಿತಿ ಸದಸ್ಯರು ಮತ್ತು ಮುಖಂಡರೊಂದಿಗೆ ಸ್ಥಳ ಪರಿಶೀಲಿಸಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ರೈತರು ಅರ್ಜಿ ಸಲ್ಲಿಸಿದ್ದು, ಅರ್ಹ ಫಲಾನುಭವಿಗಳಿಗೆ ಇದುವರೆಗೂ ಭೂ ಮಂಜೂರಾತಿಯಾಗಿಲ್ಲ.

ಕಳೆದ ಸಾಲಿನಲ್ಲಿ ಹೇರಳ ಅಕ್ರಮಗಳ ಮೂಲಕ ಭ್ರಷ್ಟಾಚಾರವೆಸಗಿ ಅಸಲಿ ರೈತರಿಗಿಂತ ನಕಲಿ ರೈತರಿಗೆ ಭೂ ಮಂಜೂರಾತಿಯಾಗಿದ್ದು, ಈಗ ಅದಕ್ಕೆ ಆಸ್ಪದ ನೀಡದೆ ಎಲ್ಲ ಅರ್ಜಿಗಳ ಬಗ್ಗೆ ಖುದ್ದು ಸ್ಥಳ ಪರಿಶೀಲಿಸಿ ಕಡಿತ ತಯಾರಿಸಿ ಜಮೀನು ಮಂಜೂರು ಮಾಡಲಾಗುವುದು ಎಂದರು.

ಮುಂದಿನ ಮಂಗಳವಾರ ತಾಯಲೂರು ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿರುವ ರೈತರ ಭೂಮಿಗಳಿಗೆ ಸರ್ವೇ ನಕ್ಷೆಯೊಂದಿಗೆ ಸಮಿತಿ ಭೇಟಿ ನೀಡಲಿದ್ದು, ಎಲ್ಲ ಪರಿಶೀಲಿನ ನಂತರ ತಾಲೂಕು ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ನೈಜ ರೈತರಿಗೆ ಮಾತ್ರ ಭೂಮಿ ಮಂಜೂರಾತಿ ಮಾಡಿ ಪಟ್ಟಾ, ಪಹಣಿ, ಮುಟೇಶನ್​ ಮೂಲಕ ಆಸ್ತಿ ಹಕ್ಕು ನೀಡಲಾಗುವುದು ಎಂದರು.

ಸಮಿತಿಯ ಸದಸ್ಯ ಗುಜ್ಜನಹಳ್ಳಿ ಆರ್​.ಮಂಜುನಾಥ್​ ಮಾತನಾಡಿ, ಶಾಸಕರ ಜತೆಗೂಡಿ ಬಡ ರೈತರಿಗೆ ಪಕ್ಷಾತಿತವಾಗಿ ಜಾತ್ಯತಿತವಾಗಿ ಭೂಮಿಯನ್ನು ಅವರ ಹೆಸರಿಗೆ ಮಾಡಿಕೊಡುವ ಸಂಕಲ್ಪ ಹೊಂದಿದ್ದೇವೆ. ಶಾಸಕರು ಸಹ ಈ ಬಗ್ಗೆ ಪ್ರಾಮಾಣಿಕವಾಗಿ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿರುವುದು ಶ್ಲಾಘನೀಯ ಎಂದರು. ಸಮಿತಿಯ ಅಧ್ಯಕ್ಷ ಶಾಸಕ ಸಮೃದ್ಧಿ ವಿ. ಮಂಜುನಾಥ್​, ಸಮಿತಿಯ ಕಾರ್ಯದರ್ಶಿ ತಹಸೀಲ್ದಾರ್​ ವಿ.ಗೀತಾ, ಸದಸ್ಯರಾದ ನೀಲಾವತಿ ಸೋಮಶೇಖರ್​, ಜಮ್ಮನಹಳ್ಳಿ ಕೃಷ್ಣಪ್ಪ, ಅವನಿ ಹೋಬಳಿ ಕಂದಾಯ ಅಧಿಕಾರಿ ಸಿ.ಸುಬ್ರಮಣಿ, ಗ್ರಾಮ ಲೆಕ್ಕಾಧಿಕಾರಿ ಕಾವ್ಯಾ, ಡಿಸಿಸಿ ಬ್ಯಾಂಕ್​ ನಿರ್ದೇಶಕ ವಿ.ರಘುಪತಿ ರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net