ಕಾಂಗ್ರೆಸ್ ಬೆಂಬಲಿತರ ಜಯಭೇರಿ

lamps
Published on

ಕುಶಾಲನಗರ

ಗುಡ್ಡೆಹೊಸೂರು ಸಮೀಪದ ಬಸವನಹಳ್ಳಿಯಲ್ಲಿರುವ ಸೋಮವಾರಪೇಟೆ ತಾಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಕಾಂಗ್ರೆಸ್ ಬೆಂಬಲಿತ ಅರುಣ್ ರಾವ್ ನೇತೃತ್ವದ 10 ಜನರ ತಂಡ ಜಯಗಳಿಸಿದೆ.

ಒಟ್ಟು 10 ನಿರ್ದೇಶಕರ ಆಯ್ಕೆ ಪ್ರಕ್ರಿಯೆಗೆ ಗುರುವಾರ ಚುನಾವಣೆ ನಡೆಯಿತು. ಇದರಲ್ಲಿ ಸೋಮವಾರಪೇಟೆ ವಲಯ ಮತ್ತು ಕುಶಾಲನಗರ ವಲಯದ ಒಟ್ಟು 20. ಆಭ್ಯರ್ಥಿಗಳು ಕಣದಲ್ಲಿದರು.

ಚುನಾವಣೆಯಲ್ಲಿ ಒಟ್ಟು 177 ಮತದಾರರಿದ್ದು 174 ಮತಗಳು ಚಲಾವಣೆಗೊಂಡಿದವು. ಇದರಲ್ಲಿ ಎರಡು ಮತಗಳು ತಿರಸ್ಕರಗೊಂಡಿದ್ದವು. ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಸಂಘದ ಸಭಾಂಗಣದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಸೋಮವಾರಪೇಟೆ ವಲಯದಿಂದ ಎಸ್. ಆರ್. ಅರುಣ್ ರಾವ್, ಉದಯಕುಮಾರ್, ಗಂಗಾಧರ್, ಶ್ಯಾಮ್, ದೇವಿರಮ್ಮ, ಕುಶಾಲನಗರ ವಲಯ ವಿಭಾಗದಿಂದ ಕಾಳಯ್ಯ, ಬಿ. ಎಸ್. ಚಂದ್ರು, ಕಮಲ, ಜಿ.ಕೆ. ರಾಜು, ಕಾವೇರಿ ಜಯಗಳಿಸಿದರು.

ವಿಜೇತ ತಂಡದವರು ಸಂಜೆ ಕುಶಾಲನಗರದಲ್ಲಿ ವಿಜಯೋತ್ಸವ ಆಚರಿಸಿದರು. ವಿಜೇತರ ಬೆಂಬಲಿಗರು, ಕಾಂಗ್ರೆಸ್ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪಕ್ಷದ ಮುಖಂಡರು, ಕಾರ್ಯಕರ್ತರು, ಮತದಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net