

ಹಾರೂಗೇರಿ: ಪಟ್ಟಣ ಸಮೀಪದ ಹಾರೂಗೇರಿ ಕ್ರಾಸ್‌ನಲ್ಲಿರುವ ಶ್ರೀ ಮಲ್ಲಿಕಾರ್ಜುನ -ಫೌಂಡೇಷನ್ ಎಸ್.ಎಂ.ನಾರಗೊಂಡ ಇಂಟರ್‌ನ್ಯಾಷನಲ್ ಆಂಗ್ಲ ಮಾಧ್ಯಮ ಸಿಬಿಎಸ್‌ಸಿ ಶಾಲೆಯಲ್ಲಿ ಸಂಭ್ರಮದಿಂದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಯಿತು.
ಬುಧವಾರ ಬೆಳಗ್ಗೆ ಶಾಲೆಯಲ್ಲಿ ನೆರದ ಮಕ್ಕಳು ಮತ್ತು ಶಿಕ್ಷಕರು ಏಕದಂತನನ್ನು ಕೂಡಿಸಲು ಪಹಲ್ಗಾಮ್ ಮಾದರಿಯಲ್ಲಿ ಮಂಟಪ ಸಿದ್ಧಪಡಿಸಿದರು. ಬಳಿಕ ಗಣಪತಿ ಬಪ್ಪ ಮೋರಯಾ ಘೋಷಣೆ ಕೊಗುತ್ತ ಮೆರವಣಿಗೆ ಸಾಗಿದರು. ಗಣಪನನ್ನು ಹೊತ್ತು ತಂದ ಸಂಸ್ಥೆ ಅಧ್ಯಕ್ಷ ವಿವೇಕ ನಾರಗೊಂಡ ಮಂಟಪದಲ್ಲಿ ಪ್ರತಿಷ್ಠಾಪಿಸಿದರು.
ಪಹಲ್ಗಾಮ್‌ನಲ್ಲಿ ಮಡಿದವರಿಗೆ ಗೌರವ: ಪಹಲಾಮ್ ದಾಳಿಯ ಪ್ರತಿಕಾರಕ್ಕೆ ನಡೆದ ಆಪರೇಷನ್ ಸಿಂಧೂರ ಮಾದರಿಯಲ್ಲಿ ಗಣೇಶ ಮಂಟಪ ಚಿತ್ರಿಕರಿಸಿ ಪಹಲ್ಗಾಮ್ ದಾಳಿಯಲ್ಲಿ ಮಡಿದವರಿಗೆ ಗೌರವ ಸಲ್ಲಿಸುತ್ತಿರುವುದು ಜನರ ಗಮನ ಸೆಳೆಯುತ್ತಿದೆ.
ಕಸ್ತೂರಿ ನಾರಗೊಂಡ, ಕಾರ್ಯದರ್ಶಿ ತ್ರಿವೇಣಿ ನಾರಗೊಂಡ, ಪ್ರಾಚಾರ್ಯ ದೀಕ್ಷಿತ, ಪ್ರಶಾಂತ ಎಲ್.ಎಚ್., ಬಿಸಿಲನಾಡು ನಾಗೇಶ ಇದ್ದರು.