

ಮಂಡ್ಯ: ಹಕ್ಕುಪತ್ರ ಹಂಚಿಕೆ ಸಂಬಂಧ ಜಿಲ್ಲಾ ಲಂಬಾಣಿ ಸೇವಾ ಸಂಘದ ವಿರುದ್ಧ ಮಾಜಿ ಸಚಿವೆ ಬಿ.ಟಿ.ಲಲಿತಾನಾಯ್ಕ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ವೆಂಕಟನಾಯ್ಕ ತಿಳಿಸಿದ್ದಾರೆ.
ಕೃಷ್ಣನಾಯ್ಕ ಅವರು 2020 ಡಿ.6ರಂದು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬಿ.ಟಿ.ಲಲಿತಾ ನಾಯ್ಕ ಹಾಗೂ ಕೃಷ್ಣನಾಯ್ಕ ಅವರ ನಡುವೆ ನಿವೇಶನ ಹಂಚಿಕೆ ಮತ್ತು ಇತರ ವಿಷಯದಲ್ಲಿ 30 ವರ್ಷ ವ್ಯವಹಾರ ನಡೆಸಿದ್ದಾರೆ. ಲಂಬಾಣಿ ಮತ್ತು ಇತರೆ ಜನಾಂಗದವರನ್ನು ನಂಬಿಸಿ ಲಕ್ಷಾಂತರ ರೂ ಪಡೆದು ನಿವೇಶನದ ಹಕ್ಕುಪತ್ರ ಮತ್ತು ಮನೆಗಳನ್ನು ನಿರ್ಮಿಸಿಲ್ಲ. ಆದ್ದರಿಂದ ತಮ್ಮ ಮೇಲೆ ಎಲ್ಲಿ ಆರೋಪ ಬರುತ್ತದೆ ಎನ್ನುವ ಹಿನ್ನೆಲೆಯಲ್ಲಿ ನನ್ನ ವಿರುದ್ಧ ದೂರಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಮಾಜಿ ಸಚಿವೆ ಅವರು ತಮ್ಮ ಹಾಗೂ ಕುಟುಂಬದವರ ಮೇಲೆ ಮಾಡಿರುವ ಎಲ್ಲ ಆರೋಪಗಳು ನಿರಾಧಾರವಾಗಿದೆ. ಸತ್ಯಕ್ಕೆ ದೂರವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ಕಾರ್ಯದರ್ಶಿ ಮಂಗಳಮ್ಮ, ವಕೀಲ ರಾಮಯ್ಯ, ನಾಗರಾಜು, ಕುಮಾರನಾಯ್ಕ, ಚಿಕ್ಕತಾಯಮ್ಮ ಇದ್ದರು.