ಲಂಬಾಣಿ ಜನರ ಜತೆ ವಿಶ್ವಾಸ, ಪ್ರೀತಿಯಿಂದ ಇರುವೆ

Lambani is with people with trust and love
ವಿಜಯಪುರದಲ್ಲಿ ನಡೆದ ಬಿಜೆಪಿ ಮಹಾಶಕ್ತಿ ಕೇಂದ್ರಗಳ ಪ್ರಮುಖರ ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು. ಪ್ರಕಾಶ ಅಕ್ಕಲಕೋಟೆ, ವಿಜುಗೌಡ ಪಾಟೀಲ, ಆರ್.ಎಸ್. ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ಸಮಾಜದ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾನು ಮುನ್ನುಗುತ್ತಿದ್ದೇನೆ. ಬಡವರು, ದಲಿತರು ಮತ್ತು ಮೇಲ್ವರ್ಗದ ಜನರು ಸೇರಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದರೆ ಮಾತ್ರ ರಾಜಕಾರಣ ಮಾಡಲು ಸಾಧ್ಯ ಎಂಬುದನ್ನು ನನ್ನ ರಾಜಕೀಯ ಜೀವನದಲ್ಲಿ ಮೊದಲಿನಿಂದಲೂ ಅರ್ಥ ಮಾಡಿಕೊಂಡಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಭಾರತೀಯ ಜನತಾ ಪಕ್ಷದ ಮಹಾಶಕ್ತಿ ಕೇಂದ್ರಗಳ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬೂತ್ ಮಟ್ಟದ ಕಾರ್ಯಕರ್ತರು ಸದೃಢವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ರಾಜಕಾರಣ ಮಾಡಲು ಸಾಧ್ಯ.

ಇಲ್ಲದಿದ್ದರೆ ನಾವು ಶೂನ್ಯಕ್ಕೆ ಸಮಾನ. ಬೂತ್‌ಗಳಲ್ಲಿನ ಶಕ್ತಿಯ ಮುಂದೆ ಯಾವ ಶಕ್ತಿಯೂ ಕಡಿಮೆಯೇ. ಪಕ್ಷ ಕಾರ್ಯಕರ್ತರಿಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವಂತೆ ಕಾಯಕರ್ತರಿಗೆ ಸಲಹೆ ನೀಡಿದರು.

ಕಳೆದ 15 ವರ್ಷಗಳಲ್ಲಿ ಜಿಲ್ಲೆಯ ಸಂಸದನಾಗಿ, ಕೇಂದ್ರ ಸಚಿವನಾಗಿ ರೈಲ್ವೆ ಹಳಿಗಳ ವಿದ್ಯುತ್ತಿಕರಣ, ರಾಷ್ಟ್ರೀಯ ಹೆದ್ದಾರಿ, ಎನ್‌ಟಿಪಿಸಿ ಸೇರಿ ಹಿಂದಿನ 10 ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಗಳಾಗಿವೆ. ಲಂಬಾಣಿ ಜನರೊಂದಿಗೆ ಅತ್ಯಂತ ವಿಶ್ವಾಸ, ಪ್ರೀತಿಯಿಂದ ಇದ್ದೇನೆ.

ನಾನು ಮತ ಚಲಾಯಿಸುವ ಮತಗಟ್ಟೆಯೂ ಕೂಡ ತಾಂಡಾದಲ್ಲಿಯೇ ಇದೆ. ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಲಂಬಾಣಿ ಜನರ ಬಗ್ಗೆ ನನ್ನ ಹೇಳಿಕೆ ತಿರುಚಲಾಗಿದೆ. ಅವರ ಬಗ್ಗೆ ನಾನು ಕೆಟ್ಟ ಪದ ಪ್ರಯೋಗಿಸಿಲ್ಲ ಎಂದು ಸಮರ್ಥಿಸಿಕೊಂಡರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ (ಕುಚಬಾಳ) ಮಾತನಾಡಿದರು. ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕ, ಜಿಲ್ಲಾ ಚುನಾವಣಾ ಪ್ರಭಾರಿ ರಾಜಶೇಖರ ಶೀಲವಂತ, ಮಾಜಿ ಶಾಸಕ ಸೋಮನಗೌಡ ಪಾಟೀಲ, ಮುಖಂಡ ವಿಜುಗೌಡ ಪಾಟೀಲ, ವಿಪ ಮಾಜಿ ಸದಸ್ಯ ಅರುಣ ಶಹಾಪೂರ, ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟೆ, ಬೆಳಗಾವಿ ಪ್ರಭಾರಿ ಚಂದ್ರಶೇಖರ ಕವಟಗಿ, ಸಂಜೀವ ಐಹೊಳೆ ಮತ್ತು ಮಹಿಳಾ ಘಟಕ ಅಧ್ಯಕ್ಷೆ ಸ್ವಪ್ನಾ ಕಣಮುಚನಾಳ ವೇದಿಕೆಯಲ್ಲಿದ್ದರು.

ಪ್ರಧಾನ ಕಾರ್ಯದರ್ಶಿ ಈರಣ್ಣಾ ರಾವೂರ ಸ್ವಾಗತಿಸಿದರು. ಮುಳುಗೌಡ ಪಾಟೀಲ ನಿರೂಪಿಸಿದರು. ವಿವಿಧ ತಾಲೂಕುಗಳ ಮಹಾಶಕ್ತಿ ಕೇಂದ್ರಗಳ ಪ್ರಮುಖರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net