

ಮಡಿಕೇರಿ: ಮಡಿಕೇರಿಯ ಇನ್ನರ್ ವೀಲ್ ಸಂಸ್ಥೆಯ ೫೦ನೇ ವರ್ಷದ ಸಂದರ್ಭ ನೂತನ ಅಧ್ಯಕ್ಷೆಯಾಗಿ ಲಲಿತಾರಾಘವನ್ ಮತ್ತು ಕಾರ್ಯದರ್ಶಿಯಾಗಿ ನಮಿತಾ ರೈ ಅಧಿಕಾರ ವಹಿಸಿಕೊಂಡರು.
ನಗರದ ರೋಟರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿತ ಕಾರ್ಯಕ್ರಮದಲ್ಲಿ ಇನ್ನರ್ ವೀಲ್‌ನಲ್ಲಿ ಸದಸ್ಯೆಯಾಗಿ ೫೦ ವರ್ಷ ಪೂರೈಸಿರುವ ಹಿರಿಯ ಸದಸ್ಯೆ ಡಾ.ಜಯಲಕ್ಷ್ಮಿ ಪಾಟ್ಕರ್ ನೂತನ ಆಡಳಿತ ಮಂಡಳಿಗೆ ಪದಗ್ರಹಣ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷೆ ಲಲಿತಾ ರಾಘವನ್, ಮಹಿಳೆಯರ ಸ್ವಾವಲಂಭನೆಗೆ ಪೂರಕವಾದ ಯೋಜನೆಗಳನ್ನು ಇನ್ನರ್ ವೀಲ್ ವತಿಯಿಂದ ಮುಂದಿನ ವರ್ಷದಲ್ಲಿ ಜಾರಿಗೊಳಿಸಲಾಗುವುದು. ಅರ್ಥಪೂರ್ಣ ಯೋಜನೆಗಳ ಮೂಲಕ ಸಮುದಾಯ ಸೇವೆಗೆ ಮುಂದಾದಾಗುವುದಾಗಿ ನುಡಿದರು.
ಕಾರ್ಯದರ್ಶಿ ನಮಿತಾ ರೈ ವಂದಿಸಿದ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಜಿಲ್ಲೆಯ ಮಾಜಿ ಅಧ್ಯಕ್ಷೆ ಪೂರ್ಣಿಮ ರವಿ, ನಿಕಟಪೂರ್ವ ಅಧ್ಯಕ್ಷೆ ಅಗ್ನೇಸ್ ಮುತ್ತಣ್ಣ, ನಿಕಟಪೂರ್ವ ಕಾರ್ಯದರ್ಶಿ ರಶ್ಮಿ ಪ್ರವೀಣ್ ಹಾಜರಿದ್ದರು. ಇದೇ ಸಂದರ್ಭದಲ್ಲಿ ಶಫಾಲಿ ರೈ ಸಂಪಾದಕತ್ನದಲ್ಲಿ ಪ್ರಕಟವಾದ ಗಿರಿಶೃಂಗ ವಾರ್ತಾ ಸಂಚಿಕೆಯನ್ನು ರೋಟರಿ ಮಡಿಕೇರಿಯ ಕಾರ್ಯದರ್ಶಿ ಪ್ರಿನ್ಸ್ ಪೊನ್ನಣ್ಣ ಅನಾವರಣಗೊಳಿಸಿದರು.