ಅಗ್ರಹಾರದ ಶಂಕರಮಠದಲ್ಲಿ ಪೌರಕಾರ್ಮಿಕರಿಂದ ಲಲಿತ ಸಹಸ್ರನಾಮ ಪಾರಾಯಣ

Lalita Sahasranama by civic workers at Shankara Math in Agrahara
Published on

ಮೈಸೂರು: ಅಗ್ರಹಾರದ ಶ್ರೀ ಶೃಂಗೇರಿ ಶಂಕರಮಠದಲ್ಲಿ ಆಷಾಢಮಾಸದ ಪ್ರಯುಕ್ತ 150ಕ್ಕೂ ಹೆಚ್ಚು ಪೌರಕಾರ್ಮಿಕರಿಂದ ಲಲಿತ ಸಹಸ್ರನಾಮ ಪಾರಾಯಣ ನಡೆಯಿತು.

ಚಾಮುಂಡಿಪುರಂನ ಬನ್ನಾರಿಯಮ್ಮ ತಂಡ, ವಿಶ್ವೇಶ್ವರನಗರದ ದೇವಸೇನಾ ತಂಡ, ಸಿಲ್ಕ್ ಫ್ಯಾಕ್ಟರಿ ವೃತ್ತದ ದುರ್ಗಾದೇವಿ ತಂಡ, ಅಕ್ಕನಬಳಗದ ರೇಣುಕಾದೇವಿ ತಂಡ, ವಸ್ತು ಪ್ರದರ್ಶನ ಆವರಣದ ಕಾಮಾಕ್ಷಿ ದೇವಿ ತಂಡ, ಶಂಕರಮಠದ ಶಾರದಾದೇವಿ ತಂಡ, ಕನಕಗಿರಿಯ ಕರುಮಾರಿಯಮ್ಮ ತಂಡ, ಗಾಡಿಚೌಕದ ಮೀನಾಕ್ಷಿದೇವಿ ತಂಡದ ಸದಸ್ಯರು ಲಲಿತ ಸಹಸ್ರನಾಮ ನಡೆಸಿಕೊಟ್ಟರು.

ಶಾಸಕ ಟಿ.ಎಸ್. ಶ್ರೀವತ್ಸ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನಾ ಕಾರ್ಯದರ್ಶಿ ಡಾ.ಲಕ್ಷ್ಮಿದೇವಿ, ನಗರ ಪಾಲಿಕೆ ಮಾಜಿ ಸದಸ್ಯೆ ಸೌಭಾಗ್ಯ ಮೂರ್ತಿ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಮಠದ ವ್ಯವಸ್ಥಾಪಕ ಶೇಷಾದ್ರಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net