ಗುಂಡೇನಹಳ್ಳಿ ಗ್ರಾಪಂಗೆ ಲಲಿತಾ ದೇಶಗತ್ತಿ ಅಧ್ಯಕ್ಷೆ

Gundenahalli GP
Published on

ಬ್ಯಾಡಗಿ: ತಾಲೂಕಿನ ಗುಂಡೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಲಲಿತಾ ಲಕ್ಕಪ್ಪ ದೇಶಗತ್ತಿ ಹಾಗೂ ಉಪಾಧ್ಯಕ್ಷರಾಗಿ ಪರಶುರಾಮ ಚನ್ನಗಿರಿ ಬುಧವಾರ ಆಯ್ಕೆಯಾದರು.

ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಲಲಿತಾ ಲಕ್ಕಪ್ಪ ದೇಶಗತ್ತಿ, ಪಾರ್ವತಿ ಎಲ್ಲಪ್ಪ ಶಿಗ್ಗಾಂವಿ ಹಾಗೂ ಸಾಮಾನ್ಯ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಪರಶುರಾಮ ಚನ್ನಗಿರಿ, ಮಾರುತಿ ಲಮಾಣಿ ನಾಮಪತ್ರ ಸಲ್ಲಿಸಿದರು. ಬಳಿಕ ಜರುಗಿದ ಚುನಾವಣೆಯಲ್ಲಿ ಲಲಿತಾ ದೇಶಗತ್ತಿ 6 ಮತ ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ, ಎದುರಾಳಿ ಪಾರ್ವತಿ ಶಿಗ್ಗಾಂವಿ 5 ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಪರಶುರಾಮ ಚನ್ನಗಿರಿ 6 ಮತ ಪಡೆದರೆ, ಮಾರುತಿ ಲಮಾಣಿ 5 ಮತ ಪಡೆದರು.

ಚುನಾವಣಾಧಿಕಾರಿಯಾಗಿ ಪಾರ್ವತೆವ್ವ ಹುಂಡೇಕಾರ ಕಾರ್ಯನಿರ್ವಹಿಸಿದರು. ಗ್ರಾಪಂ ಸದಸ್ಯರಾದ ಪುಟ್ಟವ್ವ ಉಡಚಪ್ಪ ಹರಿಜನ, ನಿಂಗನಗೌಡ ಪುಟ್ಟನಗೌಡ ಪಾಟೀಲ, ಶಿವಯೋಗಿ ಗುಂಡಪ್ಪ ಹುಣಸಿಕಟ್ಟಿ, ಮಂಜುನಾಥ ಶಿವಪ್ಪ ಯತ್ನಳ್ಳಿ, ರೇಣುಕಾ ದೇವಿಂದ್ರಪ್ಪ ಹಾವನೂರ, ಮಹೇಂದ್ರ ತಳವಾರ, ಸೀತವ್ವ ಹೊನ್ನಪ್ಪ ಕಾಟೇನಹಳ್ಳಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ ಹುಣಸಿಕಟ್ಟಿ, ಸಿಬ್ಬಂದಿ ಜಯದೇವಪ್ಪ ಅಂಗಡಿ, ಹನುಮಂತಪ್ಪ ಜಾಡರ, ಲಕ್ಷ್ಮೀ ಹುಣಸಿಕಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net