ಲಾಲ್‌ಬಾಗ್​ನಿಂದ ಮೆಟ್ರೋದಲ್ಲಿ ಪ್ರಯಾಣಿಸಲು ಟಿಕೆಟ್ ದರ ರೂ.30 ಮಾತ್ರ! ಏನಿದು ವಿಶೇಷ ಆಫರ್? ಇಲ್ಲಿದೆ ವಿವರ

mtro
Published on

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಬರುವ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲವಾಗಲೆಂದು ನಮ್ಮ ಮೆಟ್ರೋ ಆ.15ರಂದು ಲಾಲ್‌ಬಾಗ್‌ನಿಂದ ಪ್ರಯಾಣಿಸಲು ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು ಪರಿಚಯಿಸಲಿದೆ.

ಬೆ. 10 ಗಂಟೆಯಿಂದ ರಾತ್ರಿ 8ರ ವರೆಗೆ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಟಿಕೆಟ್ ದರವನ್ನು ರೂ.30ಕ್ಕೆ ನಿಗದಿಪಡಿಸಲಾಗಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ. ಪೇಪರ್ ಟಿಕೆಟ್ ಆ ದಿನದ ಒಂದು ಪುಯಾಣಕ್ಕೆ ಮಾತ್ರ ಮಾನ್ಯವಾಗಿರುತ್ತದೆ ಹಾಗೂ ಬೆ.8 ರಿಂದ ಸಂ.6ರ ವರೆಗೆ ಎಲ್ಲ ಮೆಟ್ರೋ ನಿಲ್ದಾಣಗಲ್ಲಿ ಖರೀದಿಸಬಹುದಾಗಿದೆ.

ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ಪೇಪರ್ ಟಿಕೆಟ್ ರಾ.8ರ ವರೆಗೆ ಲಭ್ಯವಿರುತ್ತದೆ. ಮೆಟ್ರೋ ಪಯಾಣಿಕರು ಲಾಲ್‌ಬಾಗ್ ನಿಲ್ದಾಣದ AFC ಗೇಟ್‌ಗಳಲ್ಲಿ ಪ್ರವೇಶಿಸಲು ಮತ್ತು ಯಾವುದೇ ನಿಲ್ದಾಣದಿಂದ ನಿರ್ಗಮಿಸಲು ಪೇಪರ್ ಟಿಕೆಟ್‌ಗಳನ್ನು ಹಾಜರಿಪಡಿಸಬೇಕಾಗುತ್ತದೆ ಎಂದು ಬಿಎಂಆರ್​ಸಿಎಲ್ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net