ಲಾಳಂದೇವನಹಳ್ಳಿ ಗ್ರಾಪಂ ಅಧ್ಯಕ್ಷೆ ದಾಕ್ಷಾಯಿಣಿ

4 KRN-2
ಕೆ.ಆರ್.ನಗರ ತಾಲೂಕಿನ ಲಾಳಂದೇವನಹಳ್ಳಿ ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾದ ಎಂ.ಡಿ.ದಾಕ್ಷಾಯಿಣಿ ಅವರನ್ನು ಗ್ರಾಪಂ ಸದಸ್ಯರು ಮತ್ತು ಜೆಡಿಎಸ್ ಮುಖಂಡರು ಅಭಿನಂದಿಸಿದರು. ಸುಮಾ ಲೋಕೇಶ್, ಜಿ.ಬಾಲಾಜಿ, ಹಂಪಾಪುರ ಕುಮಾರ್, ಚಂದ್ರಶೇಖರ್, ರಾಜಮ್ಮ, ಉಮೇಶ್, ಕುಚೇಲ, ಪುಟ್ಟರಾಜು ಇನ್ನಿತರರು ಇದ್ದರು.
Published on

ಕೆ.ಆರ್.ನಗರ: ತಾಲೂಕಿನ ಲಾಳಂದೇವನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಜೆಡಿಎಸ್ ಬೆಂಬಲಿತೆ ಎಂ.ಡಿ.ದಾಕ್ಷಾಯಿಣಿ ಆಯ್ಕೆಯಾಗಿದ್ದಾರೆ.

23 ಮಂದಿ ಸದಸ್ಯರನ್ನು ಹೊಂದಿರುವ ಲಾಳಂದೇವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಾರ್ವತಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಎಂ.ಡಿ.ದಾಕ್ಷಾಯಿಣಿ ಮತ್ತು ಜಗದಾಂಬ ಅವರು ನಾಮಪತ್ರ ಸಲ್ಲಿಸಿದರು. ಎಂ.ಡಿ.ದಾಕ್ಷಾಯಿಣಿ 13 ಮತಗಳನ್ನು ಪಡೆದು ಜಯಗಳಿಸಿದರು. ಜಗದಾಂಬ 10 ಮತಗಳನ್ನು ಗಳಿಸಿ ಪರಾಭವಗೊಂಡರು.

ಚುನಾವಣಾಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎಲ್.ಶಂಕರ್‌ಮೂರ್ತಿ ಕಾರ್ಯನಿರ್ವಹಿಸಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಿ.ಎನ್.ಸವಿತಾ, ಉಪಾಧ್ಯಕ್ಷೆ ಸುಮಾ ಲೋಕೇಶ್, ಸದಸ್ಯರಾದ ಜಯಮ್ಮ, ಜಿ.ಬಾಲಾಜಿ, ಎಸ್.ಎಂ.ಯೋಗೇಶ್, ಎಸ್.ಆರ್.ವಸಂತ, ರಮೇಶ್, ಸುಕನ್ಯಾ, ಎಂ.ಸುನೀಲ್, ಪುಷ್ಪಾ, ಜಯಂತಿ, ಎಂ.ಟಿ.ಮಹೇಶ್, ಲೋಕೇಶ್, ಎಚ್.ಆರ್.ಶಿವಕುಮಾರ್, ಎಚ್.ಡಿ.ದ್ರಾಕ್ಷಾಯಿಣಿ, ಎ.ಚೌರಪ್ಪ, ಸಿ.ಎಚ್.ವಿಮಲಾ, ಎಲ್.ಪಿ.ಉಮೇಶ್, ಎಕ್.ಎಸ್.ಗುರು, ಜಯಶೀಲ, ಸಂಪತ್ತು ಭಾಗವಹಿಸಿದ್ದರು.

ಎಂ.ಡಿ.ದಾಕ್ಷಾಯಿಣಿ ಬೆಂಬಲಿಗರು, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಹಂಪಾಪುರ ಕುಮಾರ್, ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಾಜಮ್ಮ, ಪುರಸಭಾ ಸದಸ್ಯ ಉಮೇಶ್, ಜೆಡಿಎಸ್ ಮುಖಂಡರಾದ ಕುಚೇಲ, ಪುಟ್ಟರಾಜು ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net