ಲಕ್ಷ್ಮೀವರದರಾಜಸ್ವಾಮಿ ರಥೋತ್ಸವ ಸಂಭ್ರಮ

IMG-20240420-WA0052
ಎಚ್.ಡಿ.ಕೋಟೆ ಪಟ್ಟಣದ ಶ್ರೀ ಲಕ್ಷ್ಮೀವರದರಾಜಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು.
Published on

ಎಚ್.ಡಿ.ಕೋಟೆ: ಪಟ್ಟಣದ ಶ್ರೀ ಲಕ್ಷ್ಮೀವರದರಾಜಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು.


ರಥ ಬಲಿ, ಯಾತ್ರಾದಾನ, ಶುಭ ವೃಷಭ ಲಗ್ನದಲ್ಲಿ ರಥಾರೋಹಣ ಮಾಡುವ ಮೂಲಕ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ಮೊದಲನೇ ಮುಖ್ಯ ರಸ್ತೆ ಮೂಲಕ, ಮಂಗಳವಾದ್ಯ ವೀರಗಾಸೆ, ಚಂಡೆ ಮೇಳ ಸೇರಿದಂತೆ ಕಲಾ ತಂಡಗಳೊಂದಿಗೆ ಸಾವಿರಾರು ಭಕ್ತರು ರಥವನ್ನು ಎಳೆದು ಮೊದಲನೇ ಮುಖ್ಯ ರಸ್ತೆಯಿಂದ ಎರಡನೇ ಮುಖ್ಯ ರಸ್ತೆ ಮೂಲಕ ದೇವಾಲಯ ತಲುಪಿತು.


ಸಾವಿರಾರು ಭಕ್ತರು ಪ್ರಸಾದ ವಿತರಣೆ ಮಾಡಲಾಯಿತು. ಭಾನುವಾರ ಬೆಳಗ್ಗೆ ಶ್ರೀ ವರದರಾಜಸ್ವಾಮಿ ಉತ್ಸವ ಹಾಗೂ ಮಹಾಮಂಗಳಾರತಿ, ಸಂಜೆ 6 ಗಂಟೆಗೆ ಹೆಬ್ಬಾಳ ಜಲಾಶಯದಲ್ಲಿ ತೆಪ್ಪೋತ್ಸವ, ಮಂಗಳಾರತಿ, ರಾತ್ರಿ 9ರಿಂದ 11ಗಂಟೆವರೆಗೆ ಡೋಲೋತ್ಸವ, ಕುದುರೆ ವಾಹನ ಉತ್ಸವ ಜರುಗಲಿದೆ.
ಏ.22ರಂದು ಬೆಳಗ್ಗೆ 10ಗಂಟೆಗೆ ವರದರಾಜ ಸ್ವಾಮಿ ಜಯಂತಿ, ಮಂಟಪೋತ್ಸವ, ಸಂಸ್ಥಾನ ಸೇವೆ, ಅವಭೃತಸ್ನಾನ, ಸಂಜೆ 7 ಗಂಟೆಯಿಂದ 9 ಗಂಟೆವರೆಗೆ ನಾಗವಲ್ಲಿ ಮಹೋತ್ಸವ, ಮಂಗಳಾರತಿ, ಪರಿಮಾಲೆ ಪೂರ್ಣಾವತಿ ಮಹಾಕುಂಭ ಪ್ರೇಕ್ಷಣೆ ಹಾಗೂ ಮಂಗಳಾರತಿ ನೆರವೇರಲಿದೆ.


ಏ.23ರಂದು ಬೆಳಗ್ಗೆ 9 ವರದರಾಜಸ್ವಾಮಿಗೆ ಅಭಿಷೇಕ, ಪುಷ್ಪಯಾಗ, ಸಂಜೆ 8 ರಿಂದ 9 ಗಂಟೆವರೆಗೆ ದ್ವಾದಶಾರಾಧನೆ, ಹನುಮಂತ ವಾಹನದಲ್ಲಿ ಉತ್ಸವ ಧ್ವಜಾರೋಹಣ ಮಹಾಮಂಗಳಾರತಿ, ಮೂಕಬಲಿ ಸೇರಿದಂತೆ ವಿವಿಧ ಪೂಜೆಗಳು ಜರುಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net