ಸಂಪ್ರದಾಯ ಪಾಲನೆಯಿಂದ ಲಕ್ಷ್ಮೀ ಅನುಗ್ರಹ ಪ್ರಾಪ್ತಿ

26 HOS 01
ವರಮಹಾಲಕ್ಷ್ಮೀ ಹಬ್ಬದ ನಿಮಿತ್ತ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಹಿಳೆಯರಿಗೆ ಬಾಗಿನ ಅರ್ಪಿಸಲಾಯಿತು.
Published on

ಹೊಸನಗರ: ಲಕ್ಷ್ಮೀ ಪೂಜೆಯ ಜತೆಗೆ ಮನೆಯಲ್ಲಿ ರಂಗವಲ್ಲಿ ಹಾಕುವುದು, ಹಣೆಯಲ್ಲಿ ಕುಂಕುಮ ಇಡುವುದು, ದೀಪ ಉರಿಸುವುದು ಇತರ ಸಂಪ್ರದಾಯಗಳ ಅನುಸರಣೆಯಿಂದಲೂ ಲಕ್ಷ್ಮೀ ಅನುಗ್ರಹವಾಗುತ್ತದೆ. ಜತೆಗೆ ಮಾತೆಯರಿಗೆ ಬಾಗಿನ ನೀಡಿ ಗೌರವಿಸುವುದರಿಂದಲೂ ಲಕ್ಷ್ಮೀ ಸುಪ್ರೀತಳಾಗುತ್ತಾಳೆ ಎಂದು ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪ್ರಧಾನ ಅರ್ಚಕ ಹನಿಯ ರವಿ ತಿಳಿಸಿದರು.

ಕಾರಣಗಿರಿ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆಯ ಸೂಚನೆಯಂತೆ ವರಮಹಾಲಕ್ಷ್ಮೀ ಹಬ್ಬದ ನಿಮಿತ್ತ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮೂಹಿಕವಾಗಿ ಮಹಿಳೆಯರು ಸೇರಿ ಆರಾಧನೆ ಮಾಡುವುದರಿಂದ ಹೆಚ್ಚಿನ ಶಕ್ತಿ, ಫಲ ಸಿಗುವುದಲ್ಲದೆ ಪರಸ್ಪರ ಸೌಹಾರ್ದವೂ ಬೆಳೆಯುತ್ತದೆ ಎಂದರು.
ನೂರಾರು ಮಹಿಳೆಯರಿಗೆ ಬಾಗಿನ ಅರ್ಪಿಸಲಾಯಿತು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಡಿ.ನಾಗೇಂದ್ರ ರಾವ್, ಅರ್ಚಕ ವಿನಾಯಕ ಭಟ್, ಸಮಿತಿ ಸದಸ್ಯರಾದ ಕಣಿವೆಬಾಗಿಲು ಶಂಕರನಾರಾಯಣ, ಸಾಂಬಶಿವ, ಗ್ರಾಪಂ ಸದಸ್ಯ ಹನಿಯ ಗುರುಮೂರ್ತಿ, ಕಾರ್ಯದರ್ಶಿ ಗೋಪಾಲ್, ರೆವಿನ್ಯೂ ಇನ್ಸ್‌ಪೆಕ್ಟರ್ ರೇಣುಕಯ್ಯ, ನಾಗಪ್ಪ, ವೀರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net