ಕೋಲಾರ: ಕೋಲಾರ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಮಾಲೂರಿನ ಲಕ್ಷ್ಮೀನಾರಾಯಣ್ ನೇಮಕಗೊಂಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಶನಿವಾರ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ಖಾಲಿಯಾಗಿದ್ದ ಸ್ಥಾನಕ್ಕೆ ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್‌ಕುವಾರ್ ಬಣಗಳ ನಡುವಿನ ತಿಕ್ಕಾಟದಿಂದಾಗಿ ಯಾರನ್ನೂ ನೇಮಕ ಮಾಡಲು ಸಾಧ್ಯವಾಗಿರಲಿಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ.ಚಂದ್ರಾರೆಡ್ಡಿ ಎಂಎಲ್ಸಿ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಸಿಗದ ಕಾರಣ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು. ನಂತರ ಅಧ್ಯಕ್ಷ ಸ್ಥಾನ ಹಲವು ತಿಂಗಳು ಖಾಲಿಯಾಗಿತ್ತು. ಕೆಲವು ದಿನಗಳ ಮಟ್ಟಿಗೆ ಕಳೆದ ವರ್ಷ ಜ.26ರಿಂದು ಹಂಗಾಮಿ ಅಧ್ಯಕ್ಷರನ್ನಾಗಿ ವಿ.ಆರ್.ಸುದರ್ಶನ್ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ ಮೂರು ತಿಂಗಳು ಕಳೆಯುವ ಹೊತ್ತಿಗೆ (2022ರ ಏ.15) ಬಣ ರಾಜಕೀಯಕ್ಕೆ ಬೇಸತ್ತು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಡಿಸಿಸಿ ಸಾರಥ್ಯ ವಹಿಸುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂಎಲ್‌ಸಿ ಅನಿಲ್ ಕುವಾರ್ ಮೇಲೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಮತ್ತಿತರರು ಒತ್ತಡ ತಂದಿದ್ದರು. ಆದರೆ ಈ ಹಿಂದೆ ಡಿಸಿಸಿ ಅಧ್ಯಕ್ಷರಾಗಿ ಬಿಸ್ಸೇಗೌಡ, ಎಂ.ಎಲ್.ಅನಿಲ್ ಕುವಾರ್, ಚಂದ್ರಾರೆಡ್ಡಿ ಆಯ್ಕೆಯಾಗಿದ್ದು ಎಲ್ಲರೂ ರೆಡ್ಡಿ, ಒಕ್ಕಲಿಗರಾಗಿದ್ದರಿಂದ ಈ ಬಾರಿ ಹಿಂದುಳಿದವರಿಗೆ ಪಟ್ಟ ಕಟ್ಟುವ ಪ್ರಯತ್ನ ನಡೆಯುತ್ತಿತ್ತು. ಮಾಲೂರಿನ ಲಕ್ಷ್ಮೀ ನಾರಾಯಣ್ ಅಲಿಯಾಸ್ ಲಚ್ಚಿ, ಅಂಜನಿ ಸೋಮಣ್ಣ, ಮೈಲಾಂಡಹಳ್ಳಿ ಮುನಿರಾಜು, ಮುಳಬಾಗಿಲಿನ ಕೊತ್ತೂರು ಮಂಜುನಾಥ್, ಕೋಲಾರದ ಬಿ.ಎಂ.ಮುಬಾರಕ್ ಡಿಸಿಸಿ ಅಧ್ಯಕ್ಷರಾಗಲು ಪ್ರಯತ್ನ ನಡೆಸಿದ್ದರು.
ಒಂದು ವೇಳೆ ಒಕ್ಕಲಿಗರಿಗೆ ನೀಡುವುದಾದರೆ ಮುಳಬಾಗಿಲಿನ ನೀಲಕಂಠೇಗೌಡ, ಮಾಲೂರಿನ ಕೆಸರಗೆರೆ ಸೋಮಶೇಖರ್ ಪ್ರಯತ್ನಿಸಿದ್ದರು. ಆದರೆ ಅಂತಿಮವಾಗಿ ಮಾಲೂರಿನ ಲಕ್ಷ್ಮೀನಾರಾಯಣ್ ಅವರಿಗೆ ಮಣೆ ಹಾಕುವ ಮೂಲಕ ಹಿಂದುಳಿದ ವರ್ಗದವರಿಗೆ ಡಿಸಿಸಿ ಗಾದಿ ಒಲಿದಿದೆ. ಟಾನುಟಿ ಅನುಭವಿ ನಾಯಕರು ಪಕ್ಷದಲ್ಲಿ ಇದ್ದರೂ, ಸಿದ್ದರಾಮಯ್ಯ ಸ್ಪರ್ಧಿಸುತ್ತಿದ್ದರೂ ಪಕ್ಷ ಚಟುವಟಿಕೆ ನಿಂತ ನೀರಾಗಿತ್ತು. ಯುವಜನರು ಪಕ್ಷದತ್ತ ಆಕರ್ಷಿತರಾಗುತ್ತಿರಲಿಲ್ಲ. ಆಯಾ ಕ್ಷೇತ್ರಗಳ ಶಾಸಕರೇ ಹೈಕವಾಂಡ್‌ಗಳಾಗಿ ಗೊತ್ತು, ಗುರಿಯಿಲ್ಲದೆ ಪಕ್ಷ ಚಟುವಟಿಕೆ ಮುಂದುವರಿಸಿಕೊಂಡು ಹೋಗುವ ಸ್ಥಿತಿ ಏರ್ಪಟ್ಟಿತ್ತು. ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯಬಲ್ಲ ವ್ಯಕ್ತಿಯೊಬ್ಬರನ್ನು ಡಿಸಿಸಿ ಅಧ್ಯಕ್ಷರನ್ನಾಗಿಸಿ ಚುನಾವಣೆ ಎದುರಿಸಲು ರಮೇಶ್ ಕುಮಾರ್ ಬಣದವರು ಮುಂದಾಗಿದ್ದರು. ಲಕ್ಷ್ಮೀನಾರಾಯಣ್ ಇತ್ತೀಚೆಗೆ ಕೆ.ಎಚ್.ಮುನಿಯಪ್ಪ ಆಶೀರ್ವಾದ ಸಹ ಪಡೆದು ಬಂದಿದ್ದು, ಎಲ್ಲರನ್ನು ಒಟ್ಟಿಗೆ ಕರೆದೊಯ್ಯುತ್ತಾರೆ ಎಂಬ ನಂಬಿಕೆಯಲ್ಲಿ ಇವರ ಆಯ್ಕೆಯಾಗಿದೆ.
ಹಿಂದುಳಿದ ವರ್ಗದ ನಾಯಕ: ಹಿಂದುಳಿದ ಕುಂಬಾರ ಸಮುದಾಯಕ್ಕೆ ಸೇರಿದ ಲಕ್ಷ್ಮೀನಾರಾಯಣ್ ಆಯ್ಕೆಯೊಂದಿಗೆ ವಾಲೂರು ತಾಲೂಕಿನ 2ನೇ ವ್ಯಕ್ತಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ವಾಜಿ ಶಾಸಕ ಎ.ನಾಗರಾಜು 18 ವರ್ಷ ಅಧ್ಯಕ್ಷರಾಗಿದ್ದರು. ಇನ್ನು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ರತ್ನಮ್ಮ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಟಿ.ಎಂ.ಅಶೋಕ್ ಕುವಾರ್ ಸಹ ವಾಲೂರಿನವರೇ ಆಗಿದ್ದು, ಮುಂಚೂಣಿ ಟಕಗಳಲ್ಲಿ ಆ
ತಾಲೂಕು ಸಿಂಹಪಾಲು ಪಡೆದಿದೆ.
ಜಿಲ್ಲಾ ಕಾಂಗ್ರೆಸ್ ಸ್ಥಿತಿಗತಿ ವರದಿ ಪ್ರಕಟ
ನಾವಿಕನಿಲ್ಲದ ದೋಣಿಯಂತಾದ ಜಿಲ್ಲಾ ಕಾಂಗ್ರೆಸ್ ಶೀರ್ಷಿಕೆಯಡಿ ಜಿಲ್ಲಾ ಕಾಂಗ್ರೆಸ್ ಸ್ಥಿತಿಗತಿ ಕುರಿತು 2022ರ ಆ.8ರಂದು ವಿಜಯವಾಣಿ ಸಮಗ್ರ ಸುದ್ದಿ ಪ್ರಕಟಿಸಿತ್ತು. ಕಡೆಗೂ ಎಚ್ಚೆತ್ತುಕೊಂಡಿರುವ ಚುನಾವಣೆ 3 ತಿಂಗಳಿರುವಾಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀ ನಾರಾಯಣ್ ಅವರನ್ನು ನೇಮಿಸಿದೆ.