ಬೆಂಗಳೂರು ಉತ್ತರ ತಾಲೂಕು ಕಮ್ಮಸಂದ್ರದಲ್ಲಿ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ

04 Nela ph 02 Rathotsava
Published on

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕು ಕಮ್ಮಸಂದ್ರದಲ್ಲಿ ಲಕ್ಷ್ಮೀನರಸಿಂಹ ಸ್ವಾಮಿಯ 19ನೇ ಬ್ರಹ್ಮರಥೋತ್ಸವ ಮಂಗಳವಾರ ಮಧ್ಯಾಹ್ನ 11.35ರಿಂದ 12.25ವರೆಗಿನ ವಿಜೃಂಭಣೆಯಿಂದ ನೆರವೇರಿತು.

ಸುತ್ತಮುತ್ತಲ ಹತ್ತಾರು ಗ್ರಾಮದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು, ಅಲಂಕೃತ ತೇರಿಗೆ ಬಾಳೆಹಣ್ಣು ತೂರಿ ಸಂಭ್ರಮಿಸಿದರು.

ಸುಪ್ರಭಾತ ಸೇವೆ, ಯಾಗಶಾಲೆಯಲ್ಲಿ ಪುಣ್ಯಾಹ ವಾಚನ, ರಥಬಲಿ, ಕಲಶಾರಾಧನೆ, ರಥಾಂಗಹೋಮ, ಮಹಾಸುದರ್ಶನ ಹೋಮ, ಸ್ವಾಮಿಗೆ ಮಂಟಪೋತ್ಸವ ನಡೆಸಿ ಮಹಾಮಂಗಳಾರತಿ ನಡೆಸಿದ ಬಳಿಕ ರಥೋತ್ಸವ ನಡೆಸಲಾಯಿತು.

ಜಾನಪದ ಕಲಾತಂಡಗಳ ಮೆರುಗು: ಪೂಜಾಕುಣಿತ, ಡೊಳ್ಳುಕುಣಿತ ನಗಾರಿ, ನಂದಿಧ್ವಜ ಸೇರಿ ಜಾನಪದ ಕಲಾತಂಡಗಳ ನೃತ್ಯಭಕ್ತರನ್ನು ಆಕರ್ಷಿಸಿತು.

ಬಮುಲ್ ನಿರ್ದೇಶಕ ಹಾಗೂ ಅರ್ಚಕ ಕೆ.ಎಸ್.ನರಸಿಂಹಮೂರ್ತಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಉಪವಿಭಾಗಾಧಿಕಾರಿ ದಯಾನಂದ್ ಭಂಡಾರಿ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ಸಿ.ಪಿ.ಶೈಲಜಾ, ತಹಸೀಲ್ದಾರ್ ಶಿವರಾಜು, ಅರ್ಚಕ ಕೇಶವಮೂರ್ತಿ, ಸೇವಾಕರ್ತ ಅನಂತರಾಯಮ್ಯ, ಆರ್.ನರಸಿಂಹಮೂರ್ತಿ, ಆರ್.ಗಂಗಾಧರಪ್ಪ, ಆರ್.ನರಸಿಂಹಮೂರ್ತಿ, ಬೈರಪ್ಪ, ವೆಂಕಟೇಶ್, ಪ್ರಕಾಶ್, ಶ್ರೀನಿವಾಸ್, ರವಿ, ಕೆರಪ್ಪ, ಬಸವಲಿಂಗಯ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net