ಹಳದೂರು ಗ್ರಾಪಂಗೆ ಲಕ್ಷ್ಮೀಬಾಯಿ ಅವಿರೋಧ ಆಯ್ಕೆ

GLD 28-1 AVIRODHA
ಗುಳೇದಗುಡ್ಡ ಸಮೀಪದ ಹಳದೂರು ಗ್ರಾಪಂದಲ್ಲಿ ತೆರವಾದ ಸದಸ್ಯ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಗೊಂಡ ಲಕ್ಷ್ಮೀಭಾಯಿ ಆಸಂಗೆಪ್ಪ ವಾಲ್ಮೀಕಿ ಅವರನ್ನು ಸನ್ಮಾನಿಸಲಾಯಿತು. ಚುನಾವಣಾಧಿಕಾರಿ ಸಂತೋಷ ಬೆನ್ನೂರ, ಗ್ರಾಪಂ ಅಧ್ಯಕ್ಷೆ ಮುತ್ತವ್ವ ಯಲ್ಲಪ್ಪ ಕೊಳಮಲಿ, ಉಪಾಧ್ಯಕ್ಷ ಬಸವನಗೌಡ ಯಲಗೂರದಪ್ಪ ಗೌಡ್ರ, ಸದಸ್ಯರಾದ ಲಕ್ಷ್ಮಣ ನಾಗರಾಳ, ಹನುಮಂತ ದನದಮನಿ ಇತರರಿದ್ದರು.
Published on

ಗುಳೇದಗುಡ್ಡ: ಸಮೀಪದ ಹಳದೂರು ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರೊಬ್ಬರು ಮೃತಪಟ್ಟ ಹಿನ್ನೆಲೆ ಆ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಾದನಕಟ್ಟಿ ಗ್ರಾಮದ ಲಕ್ಷ್ಮೀಬಾಯಿ ಆಸಂಗೆಪ್ಪ ವಾಲ್ಮೀಕಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಂತೋಷ ಬೆನ್ನೂರ ತಿಳಿಸಿದ್ದಾರೆ.

ಹಳದೂರು ಗ್ರಾಪಂ ಸಭಾ ಭವನದಲ್ಲಿ ಅವಿರೋಧ ಆಯ್ಕೆಗೊಂಡ ನೂತನ ಸದಸ್ಯೆ ಲಕ್ಷ್ಮೀಭಾಯಿ ಅಸಂಗೆಪ್ಪ ವಾಲ್ಮೀಕಿ ಅವರಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ಪಾದನಕಟ್ಟಿ ಗ್ರಾಮದ ದೇವಕ್ಕೆವ್ವ ಭರಮಪ್ಪ ವಾಲ್ಮೀಕಿ ಮೃತಪಟ್ಟಿದ್ದರು. ಹೀಗಾಗಿ ನೂತನ ಸದಸ್ಯರ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಅನುಸೂಚಿತ ಪಂಗಡ ಮಹಿಳೆಗೆ ಮೀಸಲಿದ್ದ ಸದಸ್ಯ ಸ್ಥಾನಕ್ಕೆ ಲಕ್ಷ್ಮೀಬಾಯಿ ವಾಲ್ಮೀಕಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನೇ ಅವಿರೋಧ ಆಯ್ಕೆ ಮಾಡಲಾಯಿತೆಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಮುತ್ತವ್ವ ಯಲ್ಲಪ್ಪ ಕೊಳಮಲಿ, ಉಪಾಧ್ಯಕ್ಷ ಬಸವನಗೌಡ ಯಲಗೂರದಪ್ಪ ಗೌಡ್ರ, ಸದಸ್ಯರಾದ ಲಕ್ಷ್ಮಣ ನಾಗರಾಳ, ಹನುಮಂತ ದನದಮನಿ, ಚಂದ್ರವ್ವ ಮಾದರ, ಮುಖಂಡರಾದ ಪಿಕೆಪಿಎಸ್ ಮಾಜಿ ಅಧ್ಯಕ್ಷ ಯೋಗಪ್ಪ ಕೊಟ್ನಳ್ಳಿ, ನೀಲಕುಮಾರ ಬಳಬಟ್ಟಿ, ಹನುಮಂತಗೌಡ ಗೌಡ್ರ, ಪಿಕೆಪಿಎಸ್ ಸದಸ್ಯ ಯಮನಪ್ಪ ವಾಲ್ಮೀಕಿ, ಗ್ರಾಪಂ ಮಾಜಿ ಅಧ್ಯಕ್ಷ ಯಂಕಣ್ಣ ಭೀಮನಗಡೆ, ಮುದಕಪ್ಪ ಹೊಸಮನಿ, ಸುರೇಶ ಗೌಡ್ರ, ರಾಮನಗೌಡ ಗೌಡ್ರ, ಮಾನಪ್ಪ ವಾಲ್ಮೀಕಿ, ಶಂಕರಗೌಡ ಗೌಡ್ರ, ರಂಗಪ್ಪ ಕೊಟ್ನಳ್ಳಿ, ರಂಗಪ್ಪ ಸಂಗಾಪೂರ, ಗದಿಗೆಪ್ಪ ಕಂಬಳಿ, ನಾರಾಯಣ ಭೀಮನಗಡೆ, ಹೊಳೆಪ್ಪ ಕಂಬಳಿ, ಕೂಬಣ್ಣ ಬಾ ಮ್ಯಾಗಿಲಮನಿ, ಹನುಮಂತ ದಿವಟಗಿ, ಮಲ್ಲಪ್ಪ ಅ ಮ್ಯಾಗಿಲಮನಿ, ರಂಗಪ್ಪ ದಿವಟಗಿ, ಲಕ್ಷ್ಮಣ ದಿವಟಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net