ಲಕ್ಷ್ಮೀ ವೆಂಕಟರಮಣ ಮೂರ್ತಿಗೆ ವಿಶೇಷ ಪೂಜೆ

17 KAMPLI 02
ಕಂಪ್ಲಿಯ ವೆಂಕಟರಮಣ ದೇವಸ್ಥಾನದಲ್ಲಿ ಆಷಾಢ ಶುದ್ಧ ಏಕಾದಶಿ ನಿಮಿತ್ತ ಲಕ್ಷ್ಮೀ ವೆಂಕಟರಮಣ ಮೂರ್ತಿಯನ್ನು ತುಳಸಿ, ಫಲಪುಷ್ಪಗಳಿಂದ ಅಲಂಕರಿಸಿರುವುದು.
Published on

ಕಂಪ್ಲಿ: ಆಷಾಢ ಶುದ್ಧ ಏಕಾದಶಿ ನಿಮಿತ್ತ ಬುಧವಾರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಕಾರ್ಯಕ್ರಮಗಳು ಜರುಗಿದವು.

ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ಮಾತನಾಡಿ, ವರ್ಷದಲ್ಲಿ 24ಏಕಾದಶಿಗಳಿದ್ದರೂ ಆಷಾಢ ಶುದ್ಧ ಏಕಾದಶಿ ಮತ್ತು ಕಾರ್ತಿಕ ಶುದ್ಧ ಏಕಾದಶಿ ಅತ್ಯಂತ ಪವಿತ್ರವಾಗಿವೆ.

ಈ ದಿನ ಏಕಾದಶಿ ಆಚರಣೆಯಿಂದ ಯಜ್ಞ ಯಾಗಾದಿ ಹೋಮ ಹವನಗಳನ್ನು ಮಾಡಿದ ಪುಣ್ಯಪ್ರಾಪ್ತಿಯಾಗುತ್ತದೆ. ಸಂಕಷ್ಟಗಳಿಂದ ದೂರವಾಗಲು ಸಾಧ್ಯವಿದೆ. ಆರೋಗ್ಯ ವೃದ್ಧಿಯಾಗುತ್ತದೆ ಎಂದರು.

ಏಕಾದಶಿ ನಿಮಿತ್ತ ಲಕ್ಷ್ಮೀ ವೆಂಕಟರಮಣ ಮೂರ್ತಿಗೆ ಪಂಚಾಮೃತಾಭಿಷೇಕ, ಸ್ತ್ರೀ ಸೂಕ್ತ ಪುರುಷ ಸೂಕ್ತ, 108ನಾರಾಯಣ ಗಾಯತ್ರಿಯಿಂದ ಕುಂಬಾಭಿಷೇಕ, ಅಷ್ಟೋತ್ತರ, ಸಹಸ್ರ ನಾಮಾರ್ಚನೆ ಸೇರಿ ನಾನಾ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net