

ಟೇಕಲ್: ಇಲ್ಲಿಗೆ ಸಮೀಪದ ಶ್ರೀ ಲಕ್ಷ್ಮೀ ವರದರಾಜ ಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಶಾಸಕ ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ತಹಸೀಲ್ದಾರ್ ರೂಪಾ ರಥೋತ್ಸವದ ಮೆರವಣಿಗೆಗೆ ಚಾಲನೆ ನೀಡಿದರು.
ರಥೋತ್ಸವದ ಅಂಗವಾಗಿ ವರದರಾಜಸ್ವಾಮಿಗೆ ಮುಂಜಾನೆಯಿಂದ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಭಕ್ತರು ದೇವಾಲಯಕ್ಕೆ ಆಗಮಿಸಿ ಹರಿಗೆ ತೀರಿಸಿದರು. ರಥೋತ್ಸವ ಸಾಗಿದ ದಾರಿಯಲ್ಲಿ ಭಕ್ತರ ದಾಹ ನೀಗಿಸಲು ಕೆಲ ಸಂ&ಸಂಸ್ಥೆಗಳವರು ಪಾನಕ, ಮಜ್ಜಿಗೆ, ಕೊಸಂಬರಿ ವಿತರಿಸಿದರು. ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯೆ ರತ್ನಮ್ಮ ನಂಜೇಗೌಡ, ಕೃಷಿಕ ಸಮಾಜ ಅಧ್ಯಕ್ಷ ಆನೆಪುರ ಹನುಮಂತಪ್ಪ, ಗ್ರಾಪಂ ಅಧ್ಯಕ್ಷ ಸುಧಮ್ಮ ಗೋವಿಂದರಾಜು, ಮಾಜಿ ಅಧ್ಯಕ್ಷರಾದ ಮಂಜುನಾಥ್, ರಾಮಮೂರ್ತಿ, ಸಂದೀಪ್, ಅರ್ಚಕರಾದ ಎಂ.ರಾಜೀವ್, ರಮೇಚಾರ್, ಮುಖಂಡರಾದ ವೆಂಕಟೇಶ್ಗೌಡ, ಬನಹಳ್ಳಿ ಸತೀಶ್, ಯಲವಗುಳಿ ಸತೀಶ್, ಬಂಡೂರು ಡಾ.ನಾರಾಯಣಸ್ವಾಮಿ ಇದ್ದರು.