

ಲಿಂಗದಹಳ್ಳಿ: ಹಿಂದು, ಮುಸ್ಲಿಂ, ಕ್ರೈಸ್ತ ಎಲ್ಲ ಧರ್ಮಗಳ ಗ್ರಂಥದ ಸಾರ ಒಂದೇ ಅಗಿದ್ದು, ಅದನ್ನು ಆರ್ಥೈಸಿಕೊಂಡು ದೇವನು ಒಬ್ಬನೇ ನಾಮ ಹಲವು ಎಂಬುದನ್ನು ತಿಳಿದು ಪ್ರತಿಯೊಬ್ಬರು ಸಹೋದರರಂತೆ ಸಹಬಾಳ್ವೆ ನಡೆಸಿದರೆ ದೇವರು ಎಲ್ಲರಿಗೂ ಒಳತು ಮಾಡುತ್ತಾನೆ ಎಂದು ಗ್ರಾಮದ ಮುಖಂಡ ಬೀರೂರು ಎನ್. ದೇವರಾಜಣ್ಣ ಹೇಳಿದರು.
ನಂದಿಬಟ್ಟಲು ಗ್ರಾಮದ ಕೋಟೆ ಶ್ರೀಲಕ್ಷ್ಮೀ ರಂಗನಾಥ ಸ್ವಾಮೀಯ ನೂತನ ದೇವಾಲಯದ 1ನೇ ವರ್ಷದ ವಾರ್ಷಿಕೋತ್ಸವ ಮತ್ತು ಜಾತ್ರಾ ಮಹೋತ್ಸವ ಹಾಗೂ ಕೆಂಡೋತ್ಸವದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ನಂದಿಬಟ್ಟಲಿನಲ್ಲಿ ನೆಲೆಸಿ ಭಕ್ತರನ್ನು ಸಬರುತ್ತಿರುವ ಕೋಟೆ ಶ್ರೀಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯ ಶಿಥಿಲಗೊಂಡಿದ್ದರಿಂದ ವರ್ಷದ ಹಿಂದೆ ಭಕ್ತಾಧಿಗಳು ಮತ್ತು ದಾನಿಗಳು ಹಾಗೂ ಸರ್ಕಾರದ ಅನುದಾನದಲ್ಲಿ ಭವ್ಯ ಸುಂದರ ದೇವಾಲಯ ನಿರ್ಮಾಣಗೊಂಡಿದ್ದು, ಅಂದು ಆದಿಚುಂಚನ ಗಿರಿ ಸೃಂಗೇರಿ ಶಾಖಾ ಮಠಾೀಶರಾದ ಶ್ರೀ ಗುಣನಾಥ ಸ್ವಾಮೀಜಿಗಳಿಂದ ಉದ್ಘಾಟನೆಗೊಂಡಿದ್ದ ನೂತನ ದೇವಾಲಯಕ್ಕೆ ಇಂದಿಗೆ ಒಂದು ವರ್ಷವಾದ ಕಾರಣ ಮೊದಲನೇ ವರ್ಷದ ವಾರ್ಷಿಕೋತ್ಸವ ಮತ್ತು ಕೆಂಡಾರ್ಚನೆ ಹಾಗೂ ಜಾತ್ರಾ ಮಹೋತ್ಸವಗಳು ಅದ್ದೂರಿಯಾಗಿ ನಡೆಯುತ್ತಿವೆ ಎಂದರು.
ಶ್ರೀಸ್ವಾಮಿಯ ಕೆಂಡೋತ್ಸವದ ನಂತರ ಶ್ರೀಲಕ್ಷ್ಮೀ ರಂಗನಾಥ ಸ್ವಾಮಿಗೆ ಅರಿಶಿನ, ಕುಂಕುಮ, ಗಂಧ, ಎಳನೀರು, ಹಾಲು, ಮೊಸರು ತಪ್ಪ ಮುಂತಾದ ಅಭಿಷೇಕಗಳನ್ನು ಮಾಡಿ ಉತ್ತಮ ಮಳೆ ಬೆಳೆಗಳಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಎನ್.ಜೆ. ಭದ್ರೇಗೌಡ ಕೋಟೆ, ಲಿಂಗದಹಳ್ಳಿ ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಕೆ.ಸಿ ನಿಂಗೇಗೌಡ, ಎನ್.ಜೆ. ಭದ್ರೇಗೌಡ, ಮಲ್ಲೇನಹಳ್ಳಿ ರಾಮಪ್ಪ, ಗ್ರಾಪಂ ಸದಸ್ಯರಾದ ಚಂದ್ರಪ್ಪ, ಕೃಷ್ಣನಾಯ್ಕ, ನಂದಿಬಟ್ಟಲು ಗ್ರಾಪಂ ಮಾಜಿ ಅಧ್ಯಕ್ಷ ಎನ್.ಪಿ.ಕೃಷ್ಣೇಗೌಡ, ನಂದಿಬಟ್ಟಲು, ತಣಿಗೆಬೈಲು, ಮಲ್ಲೇನಹಳ್ಳಿ, ಜಮ್ಮಾಪುರ, ಲಿಂಗದಹಳ್ಳಿ ಗ್ರಾಮಸ್ಥರು ಇದ್ದರು.