

ಬಾಗೇಪಲ್ಲಿ : ತಾಲೂಕಿನ ಮಿಟ್ಟೇಮರಿ ಗರುಡಾದ್ರಿ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ಸರಳವಾಗಿ ನೆರವೇರಿತು. ಮುಜರಾಯಿ ಇಲಾಖೆ ಉಸ್ತುವಾರಿಯಲ್ಲಿ ಹಮ್ಮಿಕೊಂಡಿದ್ದ ರಥೋತ್ಸವಕ್ಕೆ ತಹಸೀಲ್ದಾರ್ ಡಿ.ಎ.ದಿವಾಕರ್ ಹಾಗೂ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಚಾಲನೆ ನೀಡಿದರು.
ದೇವಾಲಯದ ಅರ್ಚಕರು ಹಾಗೂ ಆಗಮಿಕರು ದೇವಾಲಯದ ಪ್ರಾಂಗಣದಲ್ಲಿಯೇ ವಿಶೇಷ ಪೂಜೆ ಸಲ್ಲಿಸಿದರು. ಕರೊನಾ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಿಎಸೈ ಸುನೀಲ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಜಿಪಂ ಉಪ ಕಾರ್ಯದರ್ಶಿ ನೋಮೇಶ್, ತಾಪಂ ಇಒ ಮಂಜುನಾಥಸ್ವಾಮಿ, ಟಿಎಚ್‌ಒ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಕಂದಾಯ ನಿರೀಕ್ಷಕ ಉದಯ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಎಲ್.ನರಸಿಂಹಯ್ಯ, ಪಿಡಿಒ ಸಿ.ರಮೇಶ್, ಸ್ಥಳೀಯರಾದ ವಿಜಯಗೋಪಾಲರೆಡ್ಡಿ, ರಘುವೀರ್ ಸ್ವಾಮಿ, ಸ್ಟುಡೀಯೋ ಮಂಜು ಮತ್ತಿತರರು ಇದ್ದರು.
ದನಗಳ ಜಾತ್ರ ರದ್ದು: ಪ್ರತಿ ವರ್ಷ ದೇವಾಲಯದ ಎದುರಿನ ಖಾಲಿ ಜಮೀನಿನಲ್ಲಿ ದನಗಳ ಜಾತ್ರೆ ನಡೆಯುತ್ತಿತ್ತು. ಆದರೆ ಕರೊನಾ ಕಾರಣದಿಂದಾಗಿ ತಹಸೀಲ್ದಾರ್ ಆದೇಶದಿಂದ ದನಗಳ ಜಾತ್ರೆ ರದ್ದು ಮಾಡಲಾಗಿತ್ತು. ಅಷ್ಟೇ ಅಲ್ಲದೆ ರಥೋತ್ಸವದಲ್ಲಿ ಅನ್ನದಾನ, ಪಾನಕ, ಹೆಸರುಬೇಳೆ ವಿತರಣೆ ಕಾರ್ಯಕ್ರಮಗಳಿಗೂ ಅವಕಾಶ ಕಲ್ಪಸಿರಲಿಲ್ಲ.