

ಕಾರ್ಗಲ್: ಅರಳಗೋಡು ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಶುಕ್ರವಾರ ಅಧ್ಯಕ್ಷ- ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಲಕ್ಷ್ಮೀ ದಿನೇಶ್ ಆರೋಡಿ, ವೈ.ಆರ್.ರಾಜೇಶ್ ಯಲಕೋಡ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅರಳಗೋಡು ಗ್ರಾಪಂನಲ್ಲಿ ಏಳು ಸದಸ್ಯರಿದ್ದು ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಮೀಸಲಾತಿ ಇತ್ತು. ಚುನಾವಣೆಯಲ್ಲಿ ಕೇವಲ ನಾಲ್ಕು ಸದಸ್ಯರು ಭಾಗಿಯಾಗಿದ್ದರು. ಮೊದಲ ಅವಧಿಯಲ್ಲಿ ಬಿಸಿಎಂ ಎ ಮೀಸಲಾತಿ ಇದ್ದ ಹಿನ್ನ್ನೆಲೆಯಲ್ಲಿ ಮೇಘರಾಜ್ ಆರೋಡಿ ಮತ್ತು ಲಕ್ಷ್ಮೀ ದಿನೇಶ್ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ 30 ತಿಂಗಳು ಅಧಿಕಾರವನ್ನು ಹಂಚಿಕೆ ಮಾಡಿಕೊಳ್ಳಲಾಗಿತ್ತು. ಮೊದಲು ಅಧಿಕಾರ ನಡೆಸಿದ ಮೇಘರಾಜ್ ಆರೋಡಿ ಅವರು ರಾಜೀನಾಮೆ ನೀಡಿ ಲಕ್ಷ್ಮೀ ದಿನೇಶ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದು ಮೇಘರಾಜ್ ಆರೋಡಿ ಅವರ ಸಹೋದರನ ಪತ್ನಿ ಲಕ್ಷ್ಮೀ ದಿನೇಶ್.
ಸಮಾಜ ಕಲ್ಯಾಣ ಇಲಾಖೆ ಸುರೇಶ್ ಸಹನೆಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪಿಡಿಒ ಸೌಮ್ಯಾ, ಸದಸ್ಯರಾದ ಮೇಘರಾಜ್ ಆರೋಡಿ, ಲಕ್ಷ್ಮೀಕೃಷ್ಣಮೂರ್ತಿ, ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.