ಮಾ.8 ಮತ್ತು 9ರಂದು ಹಲ್ಲೇಗೆರೆಯಲ್ಲಿ ಧಾರ್ಮಿಕ ಕಾರ್ಯಕ್ರಮ: ಟ್ರಸ್ಟ್‌ನ ಉಪಾಧ್ಯಕ್ಷ ಎಚ್.ವಿ.ನಾಗರಾಜು ಮಾಹಿತಿ

Lakshmi Devi Temple Trust press conference Mandya
Published on

ಮಂಡ್ಯ: ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಲಕ್ಷ್ಮೀದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ಮಾ.8 ಮತ್ತು 9ರಂದು ಲಕ್ಷ್ಮೀದೇವಿ ದೇವಾಲಯದ ದೇವಿಯ ವಿಗ್ರಹ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಉಪಾಧ್ಯಕ್ಷ ಎಚ್.ವಿ.ನಾಗರಾಜು ತಿಳಿಸಿದರು.

ಈ ದೇವಾಲಯವು 1957ರಲ್ಲಿ ಅಂದಿನ ಮೈಸೂರು ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎನ್.ಬಾಲಕೃಷ್ಣಯ್ಯ ಅವರಿಂದ ಉದ್ಘಾಟನೆಗೊಂಡಿದ್ದು, ಪುರಾತನ ಇತಿಹಾಸವನ್ನು ಹೊಂದಿದೆ. 8ರಂದು ದೇವತಾ ಕಾರ್ಯಗಳು ನಡೆಯಲಿದ್ದು, ಅಂದು ರಾತ್ರಿ ಹೋಮ ಹಾಗೂ ಇನ್ನಿತರ ಪೂಜಾ ಕೈಂಕರ್ಯಗಳು ನೆರವೇರಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

9ರಂದು ಬೆಳಗ್ಗೆ 10ಕ್ಕೆ ಶಿರಡಿ ಸಾಯಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮೀ ಶ್ರೀನಿವಾಸ ಗುರೂಜಿ, ಬೆಂಗಳೂರಿನ ಓಂಕಾರ ಆಶ್ರಮದ ಪೀಠಾಧಿಪತಿ ಡಾ.ಮಧುಸೂದನಾನಂದಪುರಿ ಸ್ವಾಮೀಜಿ ಸಾರಥ್ಯದಲ್ಲಿ ವಿಗ್ರಹದ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ನೆರವೇರಲಿದೆ. ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಎಚ್.ವಿ.ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸ್ಕೂಫ್ ಫೌಂಡೇಷನ್‌ನ ಅಧ್ಯಕ್ಷ ಡಾ.ಹಲ್ಲೇಗೆರೆ ಮೂರ್ತಿ, ಟ್ರಸ್ಟ್‌ನ ಅಧ್ಯಕ್ಷ ಎಚ್.ವಿ.ವೆಂಕಟರಾಮು, ಉಪಾಧ್ಯಕ್ಷ ಎಚ್.ವಿ.ನಾಗರಾಜು, ಎಚ್.ಪಿ.ಶಿವಶಂಕರ್ ಉಪಸ್ಥಿತರಿರಲಿದ್ದಾರೆ. ಇದೇ ವೇಳೆ ದೇವಾಲಯಕ್ಕೆ ನೆರವಾದ ಕುಣಿಗಲ್ ತಾಲೂಕಿನ ಪಾರ್ವತಮ್ಮ ಅವರನ್ನು ಗ್ರಾಮದ ಯಜಮಾನ ಎಚ್.ಆರ್.ರಾಜಶೆಟ್ಟಿ ಸನ್ಮಾನಿಸುವರು ಎಂದು ವಿವರಿಸಿದರು.

ಗ್ರಾಮಸ್ಥರಾದ ಶಿವಶಂಕರ್, ನಾಗೇಂದ್ರ, ಪ್ರಶಾಂಶ್, ಚನ್ನಕೇಶವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net