ಲಕ್ಷ್ಮೀಅಶ್ವಿನ್‌ಗೌಡ ಬಿಜೆಪಿ ರಾಜ್ಯಕಾರ್ಯದರ್ಶಿ: ಹಲವು ವರ್ಷದ ಬಳಿಕ ಮಹತ್ವದ ಜವಾಬ್ದಾರಿ

Lakshmi Ashwin Gowda mandya
Published on

ಮಂಡ್ಯ: ರಾಜ್ಯ ಬಿಜೆಪಿಗೆ ನೂತನ ಪದಾಧಿಕಾರಿಗಳನ್ನು ನಿಯೋಜಿಸಿದ್ದು, ಅದರಂತೆ ರಾಜ್ಯಕಾರ್ಯದರ್ಶಿಯಾಗಿ ಮಾಜಿ ಐಆರ್‌ಎಸ್ ಅಧಿಕಾರಿ ಡಾ.ಲಕ್ಷ್ಮೀ ಅಶ್ವಿನ್‌ಗೌಡ ನಿಯುಕ್ತಿಗೊಂಡಿದ್ದಾರೆ.

ರಾಜಕೀಯದಲ್ಲಿದ್ದರೂ ಅವಕಾಶವಿಲ್ಲದೆ ತೆರೆಮರೆಯಲ್ಲಿದ್ದ ಲಕ್ಷ್ಮೀ ಅವರಿಗೆ ಮೊದಲ ಬಾರಿಗೆ ಮಹತ್ವದ ಜವಾಬ್ದಾರಿ ವಹಿಸಲಾಗಿದೆ. ಸಾಮಾಜಿಕ ಚಟುವಟಿಕೆ ಮೂಲಕ ಹಾಗೂ ಜೆಡಿಎಸ್‌ನಿಂದ ರಾಜಕೀಯ ಆರಂಭಿಸಿದ ಲಕ್ಷ್ಮೀ ಅಶ್ವಿನ್‌ಗೌಡ ಅವರು ನಾಗಮಂಗಲ ವಿಧಾನಸಭೆ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಾಂಕ್ಷಿಯಾಗಿದ್ದರು. ಆದರೆ ಅವಕಾಶವೇ ಸಿಗಲಿಲ್ಲ.

ಈ ಹಿನ್ನೆಲೆಯಲ್ಲಿ ಬೇಸತ್ತು ಜೆಡಿಎಸ್ ತೊರೆದು ಕೆಲ ತಿಂಗಳ ಹಿಂದೆಯಷ್ಟೇ ಬಿಜೆಪಿ ಸೇರಿದರು. ಅಂತೆಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿದಾರದರೂ ಅವಕಾಶ ಪಡೆಯುವಲ್ಲಿ ಮತ್ತೆ ವಿಲರಾದರು. ಇದೀಗ ಪಕ್ಷದಲ್ಲಿ ಉತ್ತಮ ಸ್ಥಾನ ಸಿಕ್ಕಿದ್ದು, ಅದನ್ನು ಬಳಸಿಕೊಂಡು ರಾಜಕೀಯವಾಗಿ ಯಶಸ್ಸು ಕಾಣುತ್ತಾರೆನ್ನುವುದನ್ನು ಮುಂದಿನ ದಿನದಲ್ಲಿ ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net