‘ಲಕ್ಷ್ಮೇಶ್ವರ ಮಹಾರಾಜ’ಗೆ ಅದ್ದೂರಿ ವಿದಾಯ

07 LXR-6
Published on

ಲಕ್ಷ್ಮೇಶ್ವರ: ಪಟ್ಟಣದ ಹಾವಳಿ ಹನುಮಂತದೇವರ ದೇವಸ್ಥಾನದ ಹತ್ತಿರ ಪ್ರತಿಷ್ಠಾಪಿಸಿದ್ದ ಲಕ್ಷ್ಮೇಶ್ವರದ ಮಹಾರಾಜ ಎಂದೇ ಖ್ಯಾತವಾಗಿದ್ದ ಹಿಂದು ಮಹಾಗಣಪತಿ ಮೂರ್ತಿಯ ವಿಸರ್ಜನೆಗೆ ಅದ್ದೂರಿಯಾಗಿ ಜರುಗಿತು. ಜಿಲ್ಲೆಯ ಜನಸಾಗರವೇ ಹರಿದು ಬಂದಿತ್ತು. ಮೆರವಣಿಗೆಗೆ ಚಾಲನೆ ದೊರೆತ ನಂತರ ಯುವಪಡೆ ಡಿ.ಜೆ ಅಬ್ಬರಕ್ಕೆ ಕುಣಿಯುತ್ತಾ ಸಾಗಿದರು.

ಮೆರವಣಿಗೆ ವಿದ್ಯಾರಣ್ಯ ವೃತ್ತದಿಂದ ಪಂಪ ವೃತ್ತ, ಕೋರ್ಟ್ ಸರ್ಕಲ್, ಭರಮದೇವರ ವೃತ್ತ, ಪಾದಗಟ್ಟಿ ಮೂಲಕ ಮಾಡಲಾಯಿತು. ಯುವಕರು ನೃತ್ಯ ಮಾಡುತ್ತಾ ಘೋಷಣೆಗಳನ್ನು ಮೊಳಗಿಸಿದರು. ಗಣೇಶ ಮಂಡಳಿಯವರು ಕೆಸರಿ ಪೇಟ ಧರಿಸಿದ್ದರು. ಪೊಲೀಸ್ ಸರ್ಪಗಾವಲಿನಲ್ಲಿ ಗೊಂದಲಕ್ಕೆ ಅವಕಾಶವಾಗದಂತೆ ಮೆರವಣಿಗೆ ಸಾಗಿತು.

ಡಿವೈಎಸ್‌ಪಿ ಎಂ.ಬಿ. ಸಂಕದ, ಶಿರಹಟ್ಟಿ ಸಿಪಿಐ ನಾಗರಾಜ ಮಾಡಳ್ಳಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ಮಾರ್ಗದರ್ಶನ ನೀಡಿದರು. ಪಿಎಸ್‌ಐ ಹಾಗೂ ಇತರ ಸ್ಥಳಗಳಿಂದ ಬಂದಿದ್ದ ಪಿಎಸ್‌ಐಗಳು ಬಂದೋಬಸ್ತ್ ಕೈಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net