

ಲಕ್ಷ್ಮೇಶ್ವರ: ಕವಿತೆಗಳು ಭಾವನೆ ಹಾಗೂ ಅನುಭವ, ಆಲೋಚನೆಗಳ ಅಭಿವ್ಯಕ್ತಿ ಮಾಧ್ಯಮವಾಗಿವೆ ಎಂದು ಎಂದು ಜಿಮ್ಸ್‌ನ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ಹೇಳಿದರು.
ನಮ್ಮ ನಿಮ್ಮ ವೇದಿಕೆ ಆಶ್ರಯದಲ್ಲಿ ಪಟ್ಟಣದ ಮಹಾಕವಿ ಪಂಪ ವೃತ್ತದ ಸಮೀಪವಿರುವ ಎಸ್.ಬಿ. ಮುಳ್ಳಳ್ಳಿ ನಿವಾಸದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕವಿತೆ-ಮಾತು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಹಿತ್ಯದ ಮೂಲಕ ಮನಸಿನ ಭಾವನೆ, ಕಲ್ಪನೆಗಳ ಅಭಿವ್ಯಕ್ತಿಸುವುದು ಕವಿತೆಯಾಗಿದೆ ಎಂದರು.
ಶಿಗ್ಗಾಂವಿಯ ವಿರಕ್ತ ಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಾಹಿತಿ ಡಾ.ಮಂಜುನಾಥ ಬಮ್ಮನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಾ ಚೋಟಗಲ್, ಎಸ್.ಬಿ. ಮುಳ್ಳಳ್ಳಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಎಸ್.ಪಿ. ಬಳಿಗಾರ, ಸಾಹಿತಿ ಸಿ.ಜಿ. ಹಿರೇಮಠ, ಪಿ.ಬಿ. ಖರಾಟೆ, ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ಫಕ್ಕಿರೇಶ ಮ್ಯಾಟಣ್ಣವರ, ಬಸವರಾಜ ದೊಡ್ಡಮನಿ, ಎಸ್.ಎಫ್. ಕೊಡ್ಲಿ, ರಾಜು ಪಾಟೀಲ್, ಸುವರ್ಣ ನಂದಿಕೋಲಮಠ ಇತರರಿದ್ದರು. ರವಿರಾಜ ಶಿಗ್ಲಿ ಪ್ರಾರ್ಥಿಸಿದರು. ಬಸವರಾಜ ಬಾಳೇಶ್ವರಮಠ ಕಾರ್ಯಕ್ರಮ ನಿರ್ವಹಿಸಿದರು.