

ಲಕ್ಷೆ್ಮೕಶ್ವರ: ಯಾವುದೇ ವೃತ್ತಿಯಾಗಲಿ ಅದಕ್ಕೆ ತನ್ನದೆಯಾದ ಘನತೆ ಇದೆ. ಅದರಲ್ಲೂ ಶಿಕ್ಷಕ ವೃತ್ತಿ ಹೆಚ್ಚು ಪವಿತ್ರವಾದುದು. ನಿಸ್ವಾರ್ಥ ಮತ್ತು ಪ್ರಾಮಾಣಿಕತೆಯಿಂದ ಸೇವೆ ಮಾಡಿದರೆ ಸಮಾಜ ಅವರನ್ನು ಕೊನೆವರೆಗೂ ಗೌರವದಿಂದ ನೋಡುತ್ತದೆ ಎಂದು ನಿವೃತ್ತ ಶಿಕ್ಷಕ ಹಿರಿಯ ಸಾಹಿತಿ ಪೂರ್ಣಾಜಿ ಖರಾಟೆ ಅಭಿಪ್ರಾಯಪಟ್ಟರು.
ಪಟ್ಟಣದ ಇನ್ನರ್ವ್ಹೀಲ್ ಸಂಸ್ಥೆ ವತಿಯಿಂದ ಮಂಜುಳಾ ಸತ್ಯಪ್ಪನವರ ನಿವಾಸದ ಅಂಗಳದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ನಡೆಯುವ ಚಟುವಟಿಕೆಗಳನ್ನು ಜನರು ಗಮನಿಸುತ್ತಾರೆ. ನಮ್ಮ ಕಾಯಕವನ್ನು ಪ್ರಾಮಾಣಿಕತೆಯಿಂದ ಮಾಡಬೇಕು. ಪಟ್ಟಣದ ಇನ್ನರ್ವ್ಹೀಲ್ ಸಂಸ್ಥೆ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಕೀಲ ಬಸವರಾಜ ಬಾಳೇಶ್ವರಮಠ ಮಾತನಾಡಿ, ರೋಟರಿ, ಇನ್ನರ್ವ್ಹೀಲ್ ಸಂಸ್ಥೆಗಳು ಅನೇಕ ಸಮಾಜಮುಖಿ ಕಾರ್ಯಕ್ರಮ ನಡೆಸುತ್ತವೆ. ಸಂಸ್ಥೆಗಳನ್ನು ಕಟ್ಟುವುದು ಸುಲಭ. ಆದರೆ, ಅವುಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗುವುದು ಕಷ್ಟದ ಕೆಲಸ ಎಂದರು.
ಸಂಸ್ಥೆ ಅಧ್ಯಕ್ಷೆ ರೇಖಾ ವಡಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮಾಲಾ ದಂದರಗಿ, ಡಿ.ಎಂ. ಪೂಜಾರ, ಸರೋಜಕ್ಕ ಬನ್ನೂರ ಮಾತನಾಡಿದರು. ಎನ್.ಆರ್. ಸಾತಪೂತೆ, ನಿಂಗಪ್ಪ ಗೊರವರ, ಮಂಜುಳಾ ಓದುನವರ, ನಿರ್ಮಲಾ ಅರಳಿ, ಸುಲೋಚನಾ ಜವಾಯಿ, ಅನ್ನಪೂರ್ಣ ಓದುನವರ, ಜಯಶ್ರೀ ಮೆಳ್ಳಿಗೇರಿ, ಮಂಜುಳಾ ಸತ್ಯಪ್ಪನವರ, ಸರೋಜಾ ಲಮಾಣಿ, ಅಶ್ವಿನಿ ಅಂಕಲಕೋಟಿ, ಕಾವ್ಯಾ ದೇಸಾಯಿ, ನಂದಾ ಧರ್ವಯತ, ಶೈಲಾ ಆದಿ, ಪ್ರಿಯಾ ಕುಂಬಿ, ರತ್ನಾ ರ್ಕ, ಶಿಲ್ಪಾ ಸತ್ಯಪ್ಪನವರ, ಮಂಜುಳಾ ಅಕ್ಕಿ, ಡಾ. ಶ್ರುತಿ ಹೂವಿನ, ಗಿರಿಜಾ ಮುದಗಲ್ಲ ಇದ್ದರು.