ಅಧಿವೇಶನ ಮುಗಿದರೂ ಬಿಜೆಪಿಯವರು ವಿಪಕ್ಷ ನಾಯಕನನ್ನು ನೇಮಿಸದಿರುವುದು ದುರಂತ: ಲಕ್ಷ್ಮಣ್​ ಸವದಿ

Lakshman Savadi
Published on

ಬೆಳಗಾವಿ: ವಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆದಿರುವುದು ದುರಂತದ ಕಥೆ. ಅಧಿವೇಶನ ಮುಗಿದರೂ ಬಿಜೆಪಿಯವರ ಕೈಯಲ್ಲಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದು ಅಥಣಿ ವಿಧಾನಸಭೆ ಕ್ಷೇತ್ರದ ಶಾಸಕ ಲಕ್ಷ್ಮಣ್​ ಸವದಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಈ ಕುರಿತು ಮಾತನಾಡಿದ ಸವದಿ ಇಂತಹದೊಂದು ಬೆಳವಣಿಗೆ ನಡೆದಿರುವುದು ಇತಾಹಸದಲ್ಲೇ ಇದೇ ಮೊದಲು. ಇಂತಹ ಇತಿಹಾಸವನ್ನು ಸೃಷ್ಟಿಸಲು ಬಿಜೆಪಿಯವರಿಂದ ಮಾತ್ರ ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.

Shettar Savadi

ಜವಾಬ್ದಾರಿ ನಿಭಾಯಿಸುತ್ತೇವೆ

ಹೊಸ ಸರ್ಕಾರ ರಚನೆಯಾದ ಮೇಲೆ ಶಾಸಕರು ತಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಬಳಿ ತಿಳಿಸುವುದು ವಾಡಿಕೆ. ರಾಹುಲ್​ ಗಾಂಧಿ ಹಿರಿಯ ಕಾಂಗ್ರೆಸ್​ ನಾಯಕರ ಸಭೆ ಕರೆದಿದ್ದ ಕಾರಣ ಶಾಸಕಾಂಗ ಪಕ್ಷದ ಸಭೆಯನ್ನು ಮುಂದೂಡಲಾಗಿತ್ತು. ಕಾಂಗ್ರೆಸ್​ನಲ್ಲಿ ಯಾವುದೇ ಅಸಮಾಧಾನವಿಲ್ಲ. ವಿರೋಧ ಪಕ್ಷ ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಲಕ್ಷ್ಮಣ್​ ಸವದಿ ಹಾಗೂ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ಗೆ ಕಾಂಗ್ರೆಸ್​ ಹೈಕಮಾಂಡ್​ ಜವಾಬ್ದಾರಿ ಕುರಿತು ಪ್ರತಿಕ್ರಿಯಿಸಿ ಅದು ಟಾಸ್ಕ್​ ಎನ್ನುವುದಕ್ಕಿಂತ ಒಂದು ಪಕ್ಷದಲ್ಲಿದ್ದಾಗ ಓಡಾಡಿ ಕೆಲಸ ಮಾಡಬೇಕು. ಲೋಕಸಭೆ ಚುನಾವಣೆ ನಿಮಿತ್ತ ಆಗಸ್ಟ್​ 2ರಂದು ದೆಹಲಿಯಲ್ಲಿ ರಾಹುಲ್​ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಸಭೆ ಕರೆದಿದ್ದು, ಅಲ್ಲಿ ನಮಗೆ ಕೊಡುವ ಜವಾಬ್ಧಾರಿಯನ್ನು ನಿಭಾಯಿಸುತ್ತೇವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net