

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಿಕ್ಕನೇರಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಲಕ್ಷ್ಮಮ್ಮ, ಉಪಾಧ್ಯಕ್ಷರಾಗಿ ತಾಯಮ್ಮ ಆಯ್ಕೆಯಾಗಿದ್ದಾರೆ.
ತೆರವಾಗಿದ್ದ ಸ್ಥಾನಗಳಿಗೆ ಬುಧವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಮ್ಮ ಹಾಗೂ ಶಿಲ್ಪಾ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಾಯಮ್ಮ, ಕುಬೇರ ಕುಮಾರ್, ಸುಂದ್ರಮ್ಮ ನಾಮಪತ್ರ ಸಲ್ಲಿಸಿದ್ದರು. ಪರಿಶೀಲನೆ ಬಳಿಕ ಸುಂದ್ರಮ್ಮ ನಾಮಪತ್ರ ಹಿಂಪಡೆದರು. ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಲಕ್ಷ್ಮಮ್ಮ 9 ಮತ ಪಡೆದು ಗೆಲುವು ಸಾಧಿಸಿದರು. ಶಿಲ್ಪಾ 7 ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ತಾಯಮ್ಮ 10 ಮತಗಳನ್ನು ಪಡೆದು ಜಯಶೀಲರಾದರು. ಕುಬೇರಕುಮಾರ್ 6 ಮತಗಳನ್ನು ಪಡೆದು ಸೋಲುಂಡರು. ಚುನಾವಣಾಧಿಕಾರಿಯಾಗಿ ಕಾವೇರಿ ನೀರಾವರಿ ನಿಗಮದ ಹಾರಂಗಿ ವಿಭಾಗದ ಎಇಇ ರಂಗಯ್ಯ ಕಾರ್ಯ ನಿರ್ವಹಿಸಿದರು.
ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಲಕ್ಷ್ಮಮ್ಮ ಮತ್ತು ತಾಯಮ್ಮ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಸದಸ್ಯರಾದ ಮೈತ್ರಮ್ಮ, ಯಸ್ರಿಫ್ ಪಾಷ, ಕುಮಾರ್, ಸುಲ್ಮತ್, ಕುಮಾರ್, ಅರಬ್ ಜಾನ್, ಮಹೇಶ್, ಕಿರಣ್, ಶ್ರೀನಿವಾಸ, ಶ್ರುತಿ, ಗೋವಿಂದೇಗೌಡ, ರೇಣುಕಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಕಾರ್ಯದರ್ಶಿ ಪ್ರಕಾಶ್, ಮುಖಂಡರಾದ ಕುಮಾರ, ಜ್ಯೋತಿಕುಮಾರ್, ಭೀಮಣ್ಣ, ಪುಟ್ಟರಾಜು, ವೆಂಕಟೇಶ್, ಅಣ್ಣೆಗೌಡ ಇತರರು ಇದ್ದರು.