

ಲಕ್ಷೆ್ಮೕಶ್ವರ: ಗಣೇಶ ಮೂರ್ತಿ ವಿಸರ್ಜನೆ ಮಾಡುವ ಉದ್ದೇಶದಿಂದ ಪಟ್ಟಣದ ಶಿಗ್ಲಿ ರಸ್ತೆಯ ಪುರಸಭೆಯ ಆಸ್ತಿ ಸರ್ವೆ ನಂ. 1ರಲ್ಲಿ ಸೆಪ್ಟೆಂಬರ್ನಲ್ಲಿ ನಿರ್ಮಾಣ ಮಾಡಲಾದ ಹೊಂಡವನ್ನು ಕೊನೆಗೂ ಪುರಸಭೆ ಭಾನುವಾರ ಮುಚ್ಚಿದೆ.
ಜನನಿಬಿಡ ಪ್ರದೇಶದಲ್ಲಿ ನಿರ್ವಿುಸಿರುವ ಹತ್ತಾರು ಅಡಿ ಆಳದ ಹೊಂಡದಲ್ಲಿ ಕೆಸರಿನಿಂದ ಕೂಡಿದ ಅಪಾರ ಪ್ರಮಾಣದ ನೀರಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿತ್ತು. ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಪುರಸಭೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ‘ವಿಜಯವಾಣಿ’ಯಲ್ಲಿ ‘ಹೊಂಡ ನಿರ್ವಿುಸಿ ಮರೆತುಬಿಟ್ಟ ಪುರಸಭೆ’ ಶೀರ್ಷಿಕೆಯಡಿ ವಿಸõತ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿ ಅಧಿಕಾರಿಗಳು ತುರ್ತಕ್ರಮ ಕೈಗೊಂಡಿದ್ದರಿಂದ ಸ್ಥಳೀಯರು, ವಾಹನ ಸವಾರರು ಸಂತಸ ವ್ಯಕ್ತಪಡಿಸಿದ್ದಾರೆ.